ಬೆಂಗಳೂರು: ಮಾತೆತ್ತಿದ್ರೆ ಬಂದ್ ಬಂದ್ ಎನ್ನುವ ವಾಟಾಳ್ ನಾಗರಾಜ್‍ಗೆ ಇಂದು ಬ್ಯಾಂಕ್‍ನವರು ದಿಢೀರ್ ಶಾಕ್ ಕೊಟ್ಟಿದ್ದಾರೆ. ಕತ್ತೆ ಕುರಿ ಎಮ್ಮೆ ಜೊತೆ ಬೀದಿಗೆ ಬಂದು ಪ್ರತಿಭಟನೆ ನಡೆಸುವ ವಾಟಾಳ್ ಮನೆ ಮುಂದೆ ಮಧ್ಯಾಹ್ನ ಬ್ಯಾಕ್‍ನವರು ಬಂದಿದ್ದರು.
ವಾಟಾಳ್ ವಿಜಯ ಬ್ಯಾಂಕಿನಿಂದ ಗೃಹ ಸಾಲವನ್ನು ಪಡೆದಿದ್ದರು. ಗೃಹ ಸಾಲದ 17 ಲಕ್ಷ ರೂ. ಹಣವನ್ನು ವಾಟಾಳ್ ಪಾವತಿಸಬೇಕಿತ್ತು. 2017ಕ್ಕೆ ಜುಲೈ ತಿಂಗಳಿಗೆ ಸಾಲ ಪಾವತಿಸಬೇಕಿತ್ತು. ಈ ಸಾಲದ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ನೋಟಿಸ್ ನೀಡಿತ್ತು.
ಮೂರು ನೋಟಿಸ್ ಕಳುಹಿಸಿದರೂ ವಾಟಾಳ್ ನಾಗರಾಜ್ ಅವರು ಉತ್ತರ ನೀಡಿರಲಿಲ್ಲ. ನೋಟಿಸ್ ಗೆ ಕ್ಯಾರೇ ಅನ್ನದ ವಾಟಾಳ್ ಮನೆಗೆ ಇಂದು ವಿಜಯ ಬ್ಯಾಂಕ್ ಸಿಬ್ಬಂದಿ ಲಾಯರ್ ಜೊತೆ ಆಗಮಿಸಿದ್ದರು.
ಬ್ಯಾಂಕ್‍ನವರು ಬಂದಿರುವ ಸುದ್ದಿ ಕೇಳುತ್ತಿದ್ದಂತೆ ವಾಟಾಳ್ ಮನೆಗೆ ಆಗಮಿಸಿದ್ದಾರೆ. ಬ್ಯಾಂಕ್‍ನವರನ್ನು ಹೆಂಗೋ ಮಾತಾನಾಡಿ ಸಾಗ ಹಾಕಿದ್ದಾರೆ. ವಾಟಾಳ್ ಮನವಿಯ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ಸ್ಥಳದಿಂದ ತೆರಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv