ಬೆಂಗಳೂರು: ಕ್ಷಮಾಪಣೆ – ವಿಷಾದ ಎನ್ನುವ ಪದಗಳಲ್ಲಿ ವ್ಯತ್ಯಾಸ ಇರ್ಬೋದು. ಆದ್ರೆ ಒಂದು ತೀರ್ಮಾನಕ್ಕೆ ಬಂದು ಸಮಗ್ರ ಕನ್ನಡಿಗರ ಎದುರು ಕ್ಷಮೆಯನ್ನು ಕೇಳ್ತೀನಿ ಅಂತಾ ಆ ಮನುಷ್ಯ ವಿಷಾದ ಅಂತಾ ಮಾಡಿದ್ದಾರೆ. ಹೀಗಾಗಿ ಬಾಹುಬಲಿ ಚಿತ್ರ ರಿಲೀಸ್ ಆಗೋದನ್ನ ತಡೆಯೊಲ್ಲ ಅಂತಾ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಒಂದು ರೂಮಿನಲ್ಲಿ ಕೂತು ಹೇಳಿದ್ರು ಎಲ್ಲಾ ಮಾಧ್ಯಮಗಳಲ್ಲಿ ಸತ್ಯರಾಜ್ ವಿಷಾದಪಡಿಸಿದ್ದಾರೆ. ಕ್ಷಮಾಪಣೆ ಮತ್ತು ವಿಷಾದ ಅದರಲ್ಲಿ ಭಾರೀ ದೊಡ್ಡ ವ್ಯತ್ಯಾಸವೇನಿಲ್ಲ. 30 ವರ್ಷ ಶಾಸನ ಸಭೆಯಲ್ಲಿದ್ದೆ. ಅಲ್ಲಿ ಅನೇಕ ಬಾರಿ ವಿಷಾದ ವ್ಯಕ್ತಪಡಿಸಿದ್ದೇನೆ. ಹೀಗಾಗಿ ವಿಷಾದ ಅನ್ನೋದು ಸಂಸದೀಯ ಭಾಷೆಯಾಗಿದೆ. ಇದನ್ನ ಜಾಸ್ತಿ ಬೆಳೆಸಬಾರದು. ಹೀಗಾಗಿ ಬಾಹುಬಲಿ ಚಿತ್ರವನ್ನ ತಡೆಯೋದಿಲ್ಲ. ಚಿತ್ರ ಹೋಗುತ್ತೆ. ನೀವೂ ಸೇರಿದಂತೆ ಎಲ್ರೂ ಚಿತ್ರ ನೋಡ್ಬೋದು ಅಂತಾ ವಾಟಾಳ್ ಸ್ಪಷ್ಟಪಡಿಸಿದ್ದಾರೆ.
Advertisement
ನಾನು ಹೇಳಿದ್ದು ತಪ್ಪಾಗಿದ್ರೆ ವಿಷಾದಿಸುತ್ತೇನೆ ಅಂತಾ ಸತ್ಯರಾಜ್ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಹೀಗಾಗಿ ನಮ್ಮ ಒಕ್ಕೂಟ ಒಂದು ತೀರ್ಮಾನಕ್ಕೆ ಬಂದಿದೆ. ಇದನ್ನ ಇಲ್ಲಿಗೆ ಕೈ ಬಿಡುವುದು ಒಳ್ಳೆಯದು. ಜಾಸ್ತಿ ಬೆಳೆಸಿಕೊಂಡು ಹೋಗೋದಕ್ಕಿಂತ ನಮಗೆ ಬೇರೆ ಬೇಕಾದಷ್ಟು ಹೋರಾಟಗಳಿವೆ ಅಂತಾ ಹೇಳಿದ್ರು.
Advertisement
ಇದನ್ನೂ ಓದಿ: ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಕಟ್ಟಪ್ಪ
Advertisement
ಸತ್ಯರಾಜ್ ಗೆ ಹೇಳ್ತಾ ಇದ್ದೀನಿ,`ನಿಮ್ದು ಬಾಯಿ, ನಾಯಿ ಭದ್ರ ಇರ್ಬೇಕು. ಇನ್ನು ಮುಂದಕ್ಕೆ ಎಲ್ಲೇ ಮಾತನಾಡ್ವಾಗ್ಲೂ ಯೋಚನೆ ಮಾಡಿ ಮಾತನಾಡಿ. ಇಲ್ಲೆ ಮಾತನಾಡಿದ್ರೂ ನಾನು ತಮಿಳುನಾಡು ಪರ ಅಂತಾ ಹೇಳಿ ನಮ್ಮದೇನೂ ಅಭ್ಯಂತರವಿಲ್ಲ. ಆದ್ರೆ ಕನ್ನಡಿಗರ ಬಗ್ಗೆ ಏನಾದ್ರೂ ಬಾಯ್ಬಿಟ್ಟು ಚಕಾರ ಎತ್ತಿದ್ರೆ ಮುಂದೆ ನೀವು ಯಾವುದೇ ಚಿತ್ರದಲ್ಲಿ ಪಾತ್ರ ಮಾಡಿದ್ರೂ, ಕರ್ನಾಟಕದಲ್ಲಿ ಸಂಪೂರ್ಣವಾಗಿ ಅದರ ಬಿಡುಗಡೆಗೆ ಅವಕಾಶ ಕೊಡಲ್ಲ ಅಂತಾ ವಾಟಾಳ್ ಎಚ್ಚರಿಕೆ ನೀಡಿದರು.