ಚಾಮರಾಜನಗರ: ಜಿಲ್ಲೆಗೆ ಖಾಯಂ ಉಸ್ತುವಾರಿ ಸಚಿವರು ಇಲ್ಲ. ಮೈಸೂರಿನ ಉಸ್ತುವಾರಿ ಇಲ್ಲಿಗೆ ಬಂದೂ ಜೋಡಿ ರಸ್ತೆಯಲ್ಲಿ ಜಾಲಿ ರೈಡ್ ಮಾಡಿ ಹೋಗ್ತಾರೆ. ಹೀಗಾಗಿ ಖಾಯಂ ಉಸ್ತುವಾರಿ ಸಚಿವರ ನೇಮಕ ಮಾಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ 36 ಮಂದಿ ಸತ್ತರು. ಘಟನೆಗೆ ಸಂಬಂಧಿಸಿದಂತೆ ಒಬ್ಬರನ್ನಾದರೂ ಜೈಲಿಗೆ ಕಳಿಸಿದ್ದಾರಾ?. ಡಿಸಿ, ಡೀನ್ ಯಾರನ್ನೂ ಕೂಡ ಜೈಲಿಗೆ ಕಳಿಸಿಲ್ಲ. ಸತ್ತವರ ಕುಟುಂಬದವರ ಕಷ್ಟ ಕೇಳೋರು ಯಾರು ಎಂದು ಅವರು ಪ್ರಶ್ನಿಸಿದರು. ಅಲ್ಲದೆ ನಾನೇದ್ರೂ ಸದನದಲ್ಲಿ ಇದ್ದಿದ್ರೆ 24 ಗಂಟೆಯೊಳಗೆ ಘಟನೆಗೆ ಕಾರಣರಾದವರನ್ನು ಜೈಲಿಗೆ ಕಳುಹಿಸುತ್ತಿದ್ದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೆಟ್ರೋ ಕಾಸ್ಟ್ ಇಂಡಿಯಾದ ನೂತನ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ
ಇದೇ ವೇಳೆ ವಿಧಾನ ಪರಿಷತ್ ಚುನಾವಣೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಮೊದಲನೇ ವೋಟು ಅನ್ನೋ ನನಗೆ ಕೊಡಿ. ನೀವೂ ಮತ್ತೊಂದು ವೋಟು ಯಾರಿಗಾದರೂ ಕೊಡಿ. ಪ್ರಜಾಪ್ರಭುತ್ವದಲ್ಲಿ ನಿಮ್ಮ ಮತ ಅಮೂಲ್ಯವಾಗಿದೆ ಎಂದು ಹೇಳುತ್ತಾ, ತಮ್ಮ ಪರ ಮತ ಚಲಾಯಿಸುವಂತೆ ವಾಟಾಳ್ ನಾಗರಾಜ್ ಮನವಿ ಮಾಡಿಕೊಂಡರು.