ಬೆಂಗಳೂರು: ಮಹದಾಯಿ ಬಂದ್ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪ ಮಾಡಿದ್ದ ಬಿಜೆಪಿ ನಾಯಕರಿಗೆ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸವಾಲು ಹಾಕಿದ್ದಾರೆ.
ಕರ್ನಾಟಕ ಬಂದ್ ರಾಜಕೀಯ ಪ್ರೇರಿತ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಇಂದೇ ಪ್ರಧಾನಿ ಮೋದಿ ಅವರ ಜೊತೆ ಮಾತಾನಾಡಿ ಮಹದಾಯಿ ಸಮಸ್ಯೆಗೆ ನಾನು ಸ್ಪಂದಿಸುತ್ತೇವೆ ಎಂಬುದಾಗಿ ಹೇಳಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
Advertisement
Advertisement
ಬಿಜೆಪಿ ನಾಯಕರು ಪ್ರಧಾನಿಗಳಿಂದ ಅಶ್ವಾಸನೆ ಹೇಳಿಕೆ ಕೊಟ್ಟರೆ ಒಂದು ಗಂಟೆಯೊಳಗೆ ಬಂದ್ ವಿಚಾರವನ್ನು ಕೈ ಬಿಡಲಿದ್ದೇವೆ. ಆದರೆ ಪರಿಕ್ಕರ್ ರಿಂದ ಪತ್ರದ ತರುವ ಮೂಲಕ ಯಡಿಯೂರಪ್ಪ ಅವರು ನಾಟಕ ಮಾಡಿದ್ದಾರೆ. ಆ ರೀತಿ ನಮಗೆ ನಾಟಕ ಮಾಡಲು ಬರುವುದಿಲ್ಲ ಎಂದು ಟಾಂಗ್ ನೀಡಿದರು.
Advertisement
ಕನ್ನಡ ಸಂಘಟನೆಗಳು ಯಾವ ಪಕ್ಷದ ಸ್ವತ್ತು ಅಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕರ್ನಾಟಕ ಬಂದ್‍ಗೆ ಬೆಂಬಲ ನೀಡಿದೆ. ಯಡಿಯೂರಪ್ಪ ನವರೇ ನೀವು ಬಂದ್ ಗೆ ಬೆಂಬಲ ಕೊಡಿ ನಿಮ್ಮನ್ನು ಯಾರು ಬೇಡ ಎಂದು ಹೇಳುತ್ತಾರೆ. ನಿಮ್ಮ ನಡುವಿನ ರಾಜಕೀಯಕ್ಕೆ ಹೋರಾಟಕ್ಕೆ ನಮ್ಮನ್ನು ತಳುಕು ಹಾಕುವುದಕ್ಕೆ ಹೋಗಬೇಡಿ ಎಂದು ವಾಗ್ದಾಳಿ ನಡೆಸಿದರು.