ಬೆಂಗಳೂರು: ಇಡೀ ವಿಶ್ವವೇ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸಕ್ಕೆ ಆತಂಕಕ್ಕೊಳಗಾಗಿದೆ. ಇತ್ತ ಭಾರತದಲ್ಲೂ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಕಡಿವಾಣ ದೇಶಾದ್ಯಂತ ‘ಜತನಾ ಕರ್ಫ್ಯೂ’ ಜಾರಿಯಾಗಿದೆ. ಇದಕ್ಕೇ ರಾಜ್ಯದ ಜನತೆ ಕೂಡ ಸಾಥ್ ಕೊಟ್ಟಿದ್ದಾರೆ. ಆದ್ರೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
ತಮ್ಮ ಮನೆ ಗೇಟ್ ಮುಂದೆ ಖುರ್ಚಿ ಹಾಕಿಕೊಂಡು ಕುಳಿತು, ನಾನು ಮನೆ ಒಳಗೆ ಇರಲ್ಲ ಹೊರಗೆ ಇರ್ತಿನಿ ಎಂದು ಮುಖಕ್ಕೆ ಮಾಸ್ಕ್ ಧರಿಸಿ ವಾಟಾಳ್ ಕುಳಿತ್ತಿದ್ದಾರೆ. ಇದನ್ನು ನೋಡಿದ ದಾರಿ ಹೋಕರೊಬ್ಬರು ಜನತಾ ಕರ್ಫ್ಯೂ ಮಹತ್ವವನ್ನು ತಿಳಿಸಿ ವಾಟಾಳ್ ನಾಗರಾಜ್‍ಗೆ ಬುದ್ದಿ ಹೇಳಿದ್ದಾರೆ. ಈ ವೇಳೆ ತಮಗೆ ಬುದ್ಧಿ ಹೇಳಿದ ವ್ಯಕ್ತಿಗೆ ವಾಟಾಳ್ ನಾಗರಾಜ್ ವಾಪಾಸ್ ಬುದ್ದಿ ಹೇಳಿ ಕಳುಹಿಸಿದ್ದಾರೆ.
Advertisement
Advertisement
ಜನತಾ ಕರ್ಫ್ಯೂಗೆ ಮನೆ ಹೊರಗಡೆ ಇದ್ದೇ ಸಪೋರ್ಟ್ ಮಾಡುತ್ತೇನೆ. ಮನೆ ಒಳಗೆ ಇರಲ್ಲ, ಹೊರಗೆ ಇರುತ್ತೇನೆ. ಇಗಲೂ ಮನೆ ಹೊರಗಿದ್ದೇನೆ. ಕೆಲವೇ ಕ್ಷಣಗಳಲ್ಲಿ ನಾನು ಬೀದಿಗೆ ಹೋಗುತ್ತೇನೆ. ಈ ಕರ್ಫ್ಯೂ ಬೇಕಿರಲಿಲ್ಲ ಬದಲಿಗೆ ಸ್ವಚ್ಛತಾ ದಿನ ಮಾಡಬೇಕಿತ್ತು. ಹೀಗೆ ಕರ್ಫ್ಯೂ ಘೋಷಿಸಿ ಜನರಲ್ಲಿ ಭಯದ ವಾತಾವರಣ ಮೂಡಿಸಲಾಗ್ತಿದೆ ಎಂದು ವಾಟಾಳ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.