ಸ್ಯಾಂಡಲ್ವುಡ್ನಲ್ಲಿ (Sandalwood) `ಸಿಂಹಪ್ರಿಯ’ (SimhaPriya) ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದು, ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ. ಇತ್ತೀಚೆಗಷ್ಟೇ ವಸಿಷ್ಠ ಸಿಂಹ (Vasista Simha) ಹಾಗೂ ಹರಿಪ್ರಿಯಾ (Haripriya) ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದರು. ಇದೀಗ ಹೊಸ ವರ್ಷದ ಸಂಭ್ರದಲ್ಲೀರುವ ಅಭಿಮಾನಿಗಳಿಗೆ ಮದುವೆ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ.
ಖ್ಯಾತ ಚಲನಚಿತ್ರ ನಟರಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ವಿವಾಹ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ತಿಂಗಳ 26 ರಂದು ನಡೆಯಲಿದೆ. pic.twitter.com/XxBAfeQWLO
— Pratap Simha (@mepratap) January 4, 2023
Advertisement
ಇಂದು ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ (Saccidananda Ashram Shanthivanam) ಭೇಟಿ ನೀಡಿದ್ದ ಸಿಂಹಪ್ರಿಯ ಜೋಡಿ ಗಣಪತಿ ಸಚ್ಚಿದಾನಂದ ಶ್ರೀಗಳಿಂದ ಆಶೀರ್ವಾದ ಪಡೆದು, ಮದುವೆ ಡೇಟ್ ಸಹ ಅನೌನ್ಸ್ ಮಾಡಿದ್ದಾರೆ. ಈ ಸಿಹಿ ಸುದ್ದಿಯನ್ನು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
Advertisement
ಖ್ಯಾತ ಚಲನಚಿತ್ರ ನಟರಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ವಿವಾಹ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ತಿಂಗಳ 26 ರಂದು ನಡೆಯಲಿದೆ ಅನ್ನೋ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್
Advertisement
ಚಂದನವನದ ಪ್ರತಿಭಾನ್ವಿತ ನಟ ವಸಿಷ್ಠ ಮತ್ತು ಹರಿಪ್ರಿಯಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಡಿ.3ರಂದು ಕುಟುಂಬಸ್ಥರ ಮುಂದೆ ಎಂಗೇಜ್ ಆಗಿದ್ದರು. ಈ ಬಗ್ಗೆ ಸ್ಪೆಷಲ್ ಪೋಸ್ಟ್ ಹಂಚಿಕೊಂಡು ನಿಶ್ಚಿತಾರ್ಥದ ಬಗ್ಗೆ ರಿವೀಲ್ ಮಾಡಿದ್ದರು. ಇದನ್ನೂ ಓದಿ: ಎಂಗೇಜ್ ಮೆಂಟ್ ವಿಚಾರದಲ್ಲಿ ನಾನು ಡಿಪ್ರೆಷನ್ ಗೆ ಹೋಗಿರಲಿಲ್ಲ: ನಟಿ ವೈಷ್ಣವಿ
`ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಅವರ ಭೇಟಿಯಾಗಿತ್ತು. ಇದಾದ ಬಳಿಕ ತೆಲುಗಿನ `ಎವರು’ ರಿಮೇಕ್ನಲ್ಲಿ ಇಬ್ಬರು ಜೋಡಿಯಾಗಿ ನಟಿಸಿದ್ದಾರೆ. ?ಎವರು’ ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದು, ಸಿಂಹಪ್ರಿಯಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾನೇ ಒಂದರ್ಥದಲ್ಲಿ ಪ್ರೀತಿಗೆ ತಿರುಗಲು ಕಾರಣ ಎಂದರೆ ತಪ್ಪಾಗಲಾರದು. ಬಳಿಕ ವಸಿಷ್ಠ ನಾಯಿಮರಿಯೊಂದನ್ನ ಗಿಫ್ಟ್ ಆಗಿ ಹರಿಪ್ರಿಯಾಗೆ ಕೊಟ್ಟಿದ್ದರು. ಹೀಗೆ ತಮ್ಮ ಗೆಳೆತನ ಮತ್ತಷ್ಟು ಗಟ್ಟಿಯಾದ ನಂತರದಲ್ಲಿ ಗುರುಹಿರಿಯರ ಸಮ್ಮತಿಯ ಮೇರೆಗೆ ಇತ್ತೀಚೆಗೆ ಎಂಗೇಜ್ಮೆಂಟ್ ಮಾಡಿಕೊಂಡರು. ಇದೀಗ ಇದೇ ತಿಂಗಳ 26ರಂದು ಅಂದ್ರೆ ಗಣರಾಜ್ಯೋತ್ಸವದಂದು ಹಸೆಮಣೆ ಏರಲಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k