ಚಂದನವನದ ಸ್ಟಾರ್ ಜೋಡಿಗಳಲ್ಲಿ ಒಬ್ಬರಾಗಿರುವ ನಟ ವಸಿಷ್ಠ ಸಿಂಹ- ಹರಿಪ್ರಿಯಾ ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಪತ್ನಿ ಹರಿಪ್ರಿಯಾ ಜೊತೆಗಿನ ಹೊಸ ಫೋಟೋವನ್ನ ನಟ ವಸಿಷ್ಠ ಸಿಂಹ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅವಾರ್ಡ್ ಕಾರ್ಯಕ್ರಮಕ್ಕೆ ವಿಭಿನ್ನ ಕಾಸ್ಟ್ಯೂಮ್ ನಲ್ಲಿ ಬಂದ ಜಾಕ್ವೆಲಿನ್
ಈ ವರ್ಷದ ಆರಂಭ ಜನವರಿ 26ರಂದು ಸಿಂಹಪ್ರಿಯಾ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದರು. ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದರು. ಇದೀಗ ಖುಷಿಯಿಂದ ದಾಂಪತ್ಯ ಜೀವನವನ್ನ ಸಾಗಿಸುತ್ತಿದ್ದಾರೆ.
View this post on Instagram
ಸದ್ಯ ಹೊಸ ಫೋಟೋವನ್ನ ಈ ವಸಿಷ್ಠ ಸಿಂಹ ಹಂಚಿಕೊಂಡಿದ್ದಾರೆ. ಹರಿಪ್ರಿಯಾ ಅವರು ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ಬಿಳಿ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ದಾರೆ. ಈ ಫೋಟೋ ನೋಡ್ತಿದ್ದಂತೆ ಶ್ರೀರಾಮ ಸೀತೆಯಂತೆ ಈ ಜೋಡಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ದೃಷ್ಟಿ ಆಗ್ತೈತೆ ಜಾಸ್ತಿ ನೋಡಬೇಡಿ ಎಂದು ಕ್ಯೂಟ್ ಆಗಿ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ಇನ್ನೂ ವಸಿಷ್ಠ ಸಿಂಹ- ಹರಿಪ್ರಿಯಾ ಒಟ್ಟಾಗಿ ಈಗಾಗಲೇ ಸಿನಿಮಾವೊಂದನ್ನ ಮಾಡಿದ್ದಾರೆ. ರಿಲೀಸ್‌ಗಾಗಿ ವಸಿಷ್ಠ ಸಿಂಹ ದಂಪತಿ ಎದುರು ನೋಡ್ತಿದ್ದಾರೆ. ರಿಯಲ್ ಜೋಡಿ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.