ಕನ್ನಡ ಸಿನಿಮಾ ರಂಗದ ಹೆಸರಾಂತ ನಟ ವಸಿಷ್ಠ ಸಿಂಹ (Vasishta Simha) ಮತ್ತು ನಟಿ ಹರಿಪ್ರಿಯಾ (Haripriya) ಜೋಡಿಯ ಆರತಕ್ಷತೆ ಸಮಾರಂಭ ಶನಿವಾರ ಬೆಂಗಳೂರಿನ (Bengaluru) ಹೊರವಲಯದ ಪ್ರತಿಷ್ಠಿತ ರೆಸಾರ್ಟ್ನಲ್ಲಿ ನಡೆಯಿತು. ಕುಟುಂಬದ ಸದಸ್ಯರು, ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ನಾನಾ ಕ್ಷೇತ್ರಗಳು ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಗೋಲ್ಡನ್ ಸ್ಟಾರ್ ಗಣೇಶ್, ಮಾಳವಿಕಾ ಅವಿನಾಶ್ ದಂಪತಿ, ಅಮೂಲ್ಯ ಜಗದೀಶ್, ಹಿರಿಯ ನಟ ಶೀನಾಥ್, ಲಹರಿ ಮ್ಯೂಸಿಕ್ನ ಲಹರಿ ವೇಲು, ರಮೇಶ್ ಅರವಿಂದ್, ಗಿರಿಜಾ ಲೋಕೇಶ್, ಶರಣ್, ಶೃತಿ, ಪ್ರಿಯಾಂಕಾ ಉಪೇಂದ್ರ ದಂಪತಿ ಸೇರಿದಂತೆ ಹಲವರು ಆರಕ್ಷತೆಯಲ್ಲಿ ಭಾಗಿಯಾಗಿ ಜೋಡಿ ಶುಭಹಾರೈಸಿದರು. ಇದನ್ನೂ ಓದಿ: ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ : ಮಾಜಿ ಸಿಎಂ ಚಂದ್ರಬಾಬು ನಾಯ್ಡು ಭೇಟಿ
Advertisement
Advertisement
ಜನವರಿ 26 ರಂದು ಈ ಜೋಡಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿತ್ತು. ಮದುವೆ ಸಮಾರಂಭದಲ್ಲೂ ಸಿನಿಮಾ ರಂಗದ ಅನೇಕ ಸೆಲೆಬ್ರಿಟಿಗಳು ಮತ್ತು ರಾಜಕೀಯ ಗಣ್ಯರು ಕೂಡ ಭಾಗಿಯಾಗಿದ್ದರು. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಸಂಸದ ಪ್ರತಾಪ್ ಸಿಂಹ, ಸಚಿವ ಸೋಮಶೇಖರ್, ಶಾಸಕ ರಾಮದಾಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: ನಟ ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಘೋಷಿಸಿ : ಸೇನಾನಿ ವೀರಕಪುತ್ರ ಶ್ರೀನಿವಾಸ್ ಆಗ್ರಹ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k