ವಾರದ ಹಿಂದೆ ಎಂಗೇಜ್ ಆದ ಸ್ಯಾಂಡ್ ವುಡ್ ನ ಜೋಡಿ ಧಾರ್ಮಿಕ ಪ್ರವಾಸ ಮಾಡುತ್ತಿದೆ. ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿದ ವಶಿಷ್ಠ ಸಿಂಹ ಮತ್ತು ಹರಿಪ್ರಿಯ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.
ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ಸ್ಯಾಂಡಲ್‌ವುಡ್ ಜೋಡಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಕೃಷ್ಣ ಮಠದ ಕನಕ ನವಗ್ರಹ ಕಿಂಡಿ ಮೂಲಕ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಕೃಷ್ಣ ಮಠದ ರಥಬೀದಿಯಲ್ಲಿ ಇರುವ ಕಾಣಿಯೂರು ಮಠಕ್ಕೆ ಭೇಟಿ ನೀಡಿದರು. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್
ನಿಶ್ಚಿತಾರ್ಥ ನಂತರ ಕೆಲ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಿಂಹಪ್ರಿಯ ಸುತ್ತಾಡುತ್ತಿದ್ದಾರೆ. ಶೀಘ್ರ ಹಸೆಮಣೆ ಏರುವ ಬಗ್ಗೆ, ಮುಂದಿನ ಚಿತ್ರಗಳ ಬಗ್ಗೆ ಸ್ವಾಮೀಜಿ ಗೆ ವಶಿಷ್ಠಸಿಂಹ ಮಾಹಿತಿ ನೀಡಿದರು. ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಈ ವೇಳೆ ಕಾಣಿಯೂರು ಶ್ರೀಗಳು ನವ ಜೋಡಿಯನ್ನು ಮಠದ ವತಿಯಿಂದ ಗೌರವಿಸಿದರು.