ಸ್ಯಾಂಡಲ್ವುಡ್ (Sandalwood) ನಟಿ ಹರಿಪ್ರಿಯಾ- ವಸಿಷ್ಠ ಸಿಂಹ (Vasista Simha) ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇದೀಗ 2 ತಿಂಗಳಾಗಿದೆ. ಇದೇ ಖುಷಿಗೆ ತೆಲಂಗಾಣಕ್ಕೆ ತೆರಳಿ ಪತ್ನಿ ಹರಿಪ್ರಿಯಾಗೆ ವಸಿಷ್ಠ ಸಿಂಹ ಸರ್ಪ್ರೈಸ್ ನೀಡಿದ್ದಾರೆ.
Advertisement
ಚಂದನವನದ ಚೆಂದದ ಜೋಡಿ ಸಿಂಹಪ್ರಿಯಾ (Simhapriya) ಬೆಸ್ಟ್ ಕಪಲ್ ಎಂದು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಅಂತಹದೊಂದು ಸನ್ನಿವೇಶ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಜನವರಿ 26ರಂದು ವಸಿಷ್ಠ- ಹರಿಪ್ರಿಯಾ ಹೊಸ ಬಾಳಿಗೆ ಕಾಲಿಟ್ಟಿದ್ದರು. ಮೈಸೂರಿನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು. ಸಿಂಹಪ್ರಿಯಾ ಜೋಡಿಯ ದಾಂಪತ್ಯಕ್ಕೆ (Wedding) ಕಾಲಿಟ್ಟು 2 ತಿಂಗಳಾಗಿದೆ.
Advertisement
Advertisement
ಮದುವೆಯ ಬಳಿಕ ವಸಿಷ್ಠ- ಹರಿಪ್ರಿಯಾ ಇಬ್ಬರು ಇದೀಗ ತಮ್ಮ ವೃತ್ತಿ ಬದುಕಿನತ್ತ ಗಮನ ಕೊಡ್ತಿದ್ದಾರೆ. ಸದ್ಯ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ತೆಲಂಗಾಣದಲ್ಲಿರುವ ಹರಿಪ್ರಿಯಾ ವಸಿಷ್ಠ ಸರ್ಪ್ರೈಸ್ ವಿಸೀಟ್ ಕೊಟ್ಟಿದ್ದಾರೆ. ಸಾಕಷ್ಟು ದಿನಗಳಿಂದ ಒಬ್ಬರನೊಬ್ಬರು ಮಿಸ್ ಮಾಡಿಕೊಳ್ತಿದ್ದರು. ವೈವಾಹಿಕ ಜೀವನಕ್ಕೆ 2 ತಿಂಗಳು ಪೂರೈಸಿದ ಶುಭ ಸಂದರ್ಭದಲ್ಲಿ ವಸಿಷ್ಠ, ಅವರು ಹರಿಪ್ರಿಯಾ (Haripriya) ಸೆಟ್ಗೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಜೀವನವನ್ನ ಕೊನೆ ಮಾಡ್ಕೋಬೇಕು ಅಂದ್ಕೊಂಡಿದ್ದೆ ಅವ್ರು ಉಳಿಸಿದ್ರು: ರಮ್ಯಾ
Advertisement
View this post on Instagram
ಹರಿಪ್ರಿಯಾ ಮತ್ತು ಅವರ ಸಿನಿಮಾ ಟೀಮ್ಗೆ ತಾವೇ ವಿಶೇಷ ಅಡುಗೆ ಮಾಡಿ ವಸಿಷ್ಠ ಸಿಂಹ ಬಡಿಸಿದ್ದಾರೆ. ಈ ಬಗ್ಗೆ ಪತ್ನಿ ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.