ಮುಂಬೈ: ೧ ವರ್ಷದ ಹಿಂದೆ, ಬಾಲಿವುಡ್ ನಟ ವರುಣ್ ಧವನ್ ತಮ್ಮ ಬಾಲ್ಯದ ಗೆಳತಿ ನತಾಶಾ ದಲಾಲ್ ಅವರನ್ನು ವಿವಾಹವಾಗಿದ್ದರು. ಈಗ ವರುಣ್ ಮತ್ತು ನತಾಶಾ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ.
ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ವರುಣ್ ತಮ್ಮ ಪತ್ನಿ ನತಾಶಾ ಅವರೊಂದಿಗಿನ ಪೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಐಜಿ ಹ್ಯಾಂಡಲ್‌ನಲ್ಲಿ ಸರಣಿ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಪೋಟೋಗೆ ಅವರು ನೀಡಿದ ಶೀರ್ಷಿಕೆಯು ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ: ಬಿಜೆಪಿ ತನ್ನ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ: ಉದ್ಧವ್ ಠಾಕ್ರೆ
View this post on Instagram
ವರುಣ್ ಮತ್ತು ನತಾಶಾ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಹಾಗೂ ಬಾಲಿವುಡ್ ನಟ ಟೈಗರ್ ಶ್ರಾಫ್ ಈ ಜೋಡಿಯನ್ನು ಅಭಿನಂದಿಸಿದ್ದಾರೆ. ವರುಣ್ ಅವರ ಪೋಸ್ಟ್‌ಗೆ ಕಮೆಂಟ್ ಮಾಡುವ ಮೂಲಕ ಟೈಗರ್ ಅಭಿನಂದನೆ ಸಲ್ಲಿಸಿದ್ದಾರೆ.
ಫೋಟೋದಲ್ಲಿ ನಟನು ತಮ್ಮ ಮೊದಲ ಚಿತ್ರದಲ್ಲಿ ನತಾಶಾ ಕೈ ಹಿಡಿದುಕೊಂಡಿದ್ದಾರೆ. ಎರಡನೇ ಫೋಟೋದಲ್ಲಿ, ದಂಪತಿಯು ಮದುವೆ ಹಾರ ವಿನಿಮಯ ಮಾಡಿಕೊಂಡಿದ್ದಾರೆ. ಕೊನೆಯ ಚಿತ್ರದಲ್ಲಿ, ದಂಪತಿಗಳು ಪರಸ್ಪರ ದಿಟ್ಟಿಸಿ ನೋಡುವ ಫೋಟೋ ಇದೆ.
ವರುಣ್ – ನತಾಶಾ ಲವ್ ಸ್ಟೋರಿ: ವರುಣ್ ಮತ್ತು ನತಾಶಾ ಆರನೇ ತರಗತಿಯಿಂದಲೇ ಪರಸ್ಪರ ಪರಿಚಿತರು. ಆದಾದ ಕೆಲ ವರ್ಷಗಳ ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಮೊದಲಿಗೆ ಅವರು ಸಂಗೀತ ಕಚೇರಿಯಲ್ಲಿ ಭೇಟಿಯಾಗಿ, ಬಳಿಕ ಆಗಾಗ್ಗೆ ಭೇಟಿಯಾಗಲು ಪ್ರಾರಂಭಿಸಿದರು. ಅಂತಿಮವಾಗಿ ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇದನ್ನೂ ಓದಿ: ಸಕಲೇಶಪುರದಲ್ಲಿ ಕಲ್ಲು ಎತ್ತಿ ಹಾಕಿ ವೃದ್ಧೆಯ ಬರ್ಬರ ಹತ್ಯೆ
ವರುಣ್ ತನ್ನ ಬಾಲ್ಯದ ಪ್ರಿಯತಮೆ ನತಾಶಾ ಜೊತೆಗಿನ ಸಂಬಂಧದ ಬಗ್ಗೆ ಯಾರಲ್ಲೂ ಹೇಳಿರಲಿಲ್ಲ. ಆದರೆ, ಕಾಫಿ ವಿತ್ ಕರಣ್ ೬ ಕಾರ್ಯಕ್ರಮದಲ್ಲಿ ನಾನು ನತಾಶಾ ಜೊತೆ ಡೇಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಮದುವೆಯಾಗುತ್ತೇನೆ ಎಂದು ಹೇಳಿದ್ದರು.