‘ಮಹಾನಟಿ’ ಕೀರ್ತಿ ಸುರೇಶ್ (Keerthy Suresh) ಅವರು ವರುಣ್ ಧವನ್‌ಗೆ ಜೋಡಿಯಾಗೋ ಮೂಲಕ ಬಾಲಿವುಡ್‌ಗೆ (Bollywood) ಎಂಟ್ರಿ ಕೊಟ್ಟಿದ್ದಾರೆ. ನಟಿಯ ಮೊದಲ ಹಿಂದಿ ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಕೀರ್ತಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಬೇಬಿ ಜಾನ್’ (Baby John) ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ ಕುರಿತು ನಟಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಸ್ಟೈಲೀಶ್ ಆದ ಸಂಜನಾ ಬುರ್ಲಿ ಲುಕ್‌ಗೆ ಪಡ್ಡೆಹುಡುಗರು ಫಿದಾ
ವರುಣ್ ಧವನ್ (Varun Dhawan) ಜೊತೆ ಕೀರ್ತಿ ಡ್ಯಾನ್ಸ್ ಮಾಡಿರುವ ಚಿತ್ರದ ಮೊದಲ ಸಾಂಗ್ ಅನ್ನು ಇದೇ ನ.25ಕ್ಕೆ ರಿಲೀಸ್ ಮಾಡೋದಾಗಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಅದಕ್ಕೂ ಮುನ್ನ ಸಾಂಗ್‌ನ ಸಣ್ಣ ಪ್ರೋಮೋವೊಂದನ್ನು ನಟಿ ಶೇರ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಲ್ಲಿ ಈ ಸಿನಿಮಾದ ಸಾಂಗ್ ಬಗ್ಗೆ ಕ್ರೇಜ್ ಹೆಚ್ಚಾಗಿದೆ.
View this post on Instagram
ವರುಣ್ ಜೊತೆ ಕೀರ್ತಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನ ಮ್ಯೂಸಿಕ್ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಫುಲ್ ಸಾಂಗ್ ನೋಡಲು ಕಾತರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೂ ಈ ಚಿತ್ರವನ್ನು ‘ಜವಾನ್’ ಡೈರೆಕ್ಟರ್ ಅಟ್ಲಿ ನಿರ್ದೇಶನ ಮಾಡಿದ್ದಾರೆ.
ಸಿನಿಮಾದಲ್ಲಿ ವರುಣ್ ಧವನ್ ಪವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಟ್ಲಿ ನಿರ್ದೇಶನ ಮಾಡಿದ್ದ ತಮಿಳಿನ ‘ತೇರಿ’ ಚಿತ್ರದ ಕಥೆಯನ್ನೇ ಬಾಲಿವುಡ್‌ನಲ್ಲಿ ತೋರಿಸಲು ರೆಡಿಯಾಗಿದ್ದಾರೆ. ತಮಿಳಿನಲ್ಲಿ ವಿಜಯ್ ದಳಪತಿ, ಸಮಂತಾ ನಟಿಸಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.