ಬಾಲಿವುಡ್ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಬಹುಬೇಡಿಕಯ ನಟಿಮಣಿಯರ ಸಾಲಿನಲ್ಲಿ ಒಬ್ಬರು. ಬಲಾವ್ ಸಿನಿಮಾ ಮೂಲಕ ನಟ ವರುಣ್ ಧವನ್ ಜೊತೆಗೆ ಜಾನ್ವಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
‘ಇಬ್ಬರು ಬಿಗ್ ಸ್ಟಾರ್ಗಳನ್ನು ಇಟ್ಟುಕೊಂಡು ನನ್ನ ಮುಂದಿನ ಪ್ರಾಜೆಕ್ಟ್ ಪ್ಲ್ಯಾನ್ ಮಾಡಿದ್ದೇನೆ. ಚಿತ್ರಕ್ಕೆ ಬವಾಲ್ ಎಂದು ಹೆಸರಿಡಲಾಗಿದ್ದು, 2023 ಏಪ್ರಿಲ್ 7ರಂದು ಸಿನಿಮಾ ಬಿಡುಗಡೆಯಾಗಲಿದೆ. ವರುಣ್ ಮತ್ತು ಜಾನ್ವಿ ತಮ್ಮ ಕೆಮಿಸ್ಟ್ರಿ ಮೂಲಕ ಸಿನಿಮಾದಲ್ಲಿ ಮೋಡಿ ಮಾಡಲಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ನಿತೇಶ್ ತಿವಾರಿ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
View this post on Instagram
ನನ್ನ ಮುಂದಿನ ಸಿನಿಮಾ ಬಗ್ಗೆ ನಾನು ತುಂಬಾ ಕಾತುರನಾಗಿದ್ದೇನೆ ಎಂದು ಬರೆದುಕೊಂಡಿರುವ ವರುಣ್ ಧವನ್ ಬವಾಲ್ ಸಿನಿಮಾದ ಪೋಸ್ಟರ್ನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು
ಜಾನ್ವಿ ಕಪೂರ್ ಗುಡ್ಲಕ್ ಜೆರ್ರಿ ಮತ್ತು ಮಿಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಮಲಯಾಳಂನ ಹೆಲೆನ್ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ. ಇದೀಗ ಬಲಾವ್ ಸಿನಿಮಾದಲ್ಲಿ ವರೂಣ್ ಧವನ್ ಅವರಿಗೆ ಜೊತೆಯಾಗಿದ್ದಾರೆ.