ವರ್ತೂರ್ ಸಂತೋಷ್ (Varthur Santhosh) ಕೆಂಡ ಕಾರುತ್ತಿದ್ದಾರೆ. ಇದುವರೆಗೆ ಬಿಗ್‌ಬಾಸ್ (Bigg Boss) ಮನೆಯಲ್ಲಿದ್ದರು. ಆಗ ಹೊರಗಿನ ವಿಷಯ ಗೊತ್ತಾಗುತ್ತಿರಲಿಲ್ಲ. ಅಂದರೆ ಊರಿನ ಜನರು ಏನು ಮಾತಾಡುತ್ತಿದ್ದಾರೆ? ವೈಯಕ್ತಿಕ ವಿಷಯಗಳನ್ನು ಹೇಗೆ ಕೆಣಕುತ್ತಿದ್ದಾರೆ? ಯಾವ ರೀತಿ ಗೇಲಿ ಮಾಡುತ್ತಿದ್ದಾರೆ? ಇದೆಲ್ಲವನ್ನೂ ಅವರಿಗೆ ಗೊತ್ತಿರಲಿಲ್ಲ. ಈಗ ಒಂದೊಂದೇ ವಿಷಯ ಹೊರ ಬೀಳುತ್ತಿವೆ. ಅದಕ್ಕಾಗಿಯೇ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಏನಂದರು ಹಳ್ಳಿಕಾರ್ ಹುಡುಗ? ಯಾರಿಗೆ ಎಚ್ಚರಿಕೆ ನೀಡಿದರು ? ಅದರ ಮಾಹಿತಿ ಇಲ್ಲಿದೆ.
ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಗೆ ಹೋಗೋವರೆಗೂ ಇವರು ಯಾರಿಗೂ ಹೆಚ್ಚು ಪರಿಚಯ ಇರಲಿಲ್ಲ. ಹಳ್ಳಿಕಾರ್ ಹೋರಿಗಳನ್ನು ಬೆಳೆಸುತ್ತಾ, ಅದರ ಬಗ್ಗೆ ಜನರಿಗೆ ಪ್ರೀತಿ ಹುಟ್ಟಿಸುತ್ತಾ, ನಿಯತ್ತನ್ನು ಬೆಳೆಸುತ್ತಾ ಇದ್ದರು. ಆದರೆ ಯಾವಾಗ ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟರೊ ಅಲ್ಲಿಂದ ಇವರು ಕರುನಾಡಿನಲ್ಲಿ ಮೆರವಣಿಗೆ ಹೊರಟರು. ಅದು ಅಂತಿಂಥ ಮೆರವಣಿಗೆ ಅಲ್ಲ. ಎಲ್ಲರೂ ಇವರನ್ನು ಹಳ್ಳಿಕಾರ್ ಹೈದ ಎನ್ನುವ ಬಿರುದನ್ನು ಕೊಟ್ಟರು. ಅದನ್ನೂ ಕೆಲವರಿಗೆ ಸಹಿಸಲು ಆಗಲಿಲ್ಲ. ಆದರೇನಂತೆ ಈಗ ವರ್ತೂರ್ ಸಂತೋಷ್ ಕೂಡ ಸೆಲೆಬ್ರಿಟಿ ಆಗಿದ್ದಾರೆ. ಅದಕ್ಕಾಗಿಯೇ ಹಳ್ಳಿಕಾರ್ ಹೋರಿಗಳ ಜಾತ್ರೆ ಮಾಡುತ್ತಿದ್ದಾರೆ.
ಹಳ್ಳಿಕಾರ್ ಜಾತ್ರೆ ಮಾಡುವುದಾಗಿ ಮೊದಲೇ ಘೋಷಣೆ ಮಾಡಿದ್ದರು. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗ ನೋಡಿದರೆ ಕೆಲವರು ಇವರ ವೈಯಕ್ತಿಕ ಬದುಕನ್ನು ಇಟ್ಟುಕೊಂಡು ಗೇಲಿ ಮಾಡುತ್ತಿದ್ದಾರೆ. ಇವರಿಗೆ ಮದುವೆ ಆಗಿದ್ದನ್ನು ಮುಚ್ಚಿಡಲಿಲ್ಲ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿಯಿಂದ ದೂರವಾಗಿದ್ದನ್ನು ಮುಚ್ಚಿಡಲಿಲ್ಲ. ಆದರೆ ಅದ್ಯಾಕೊ ಇವರ ಮೇಲೆ ಕೋಪ ಹುಟ್ಟಿಕೊಂಡಿತು. ಅದು ಹೆಣ್ಣು ಕೊಟ್ಟ ಮಾವನಿಗೆ. ಹೀಗಾಗಿಯೇ ಆ ಮಾವ ಸಂತೋಷ್ ಬಗ್ಗೆ ಪ್ರೆಸ್ ಮೀಟ್ ಮಾಡಿದರು. ಇವರ ಮೇಲೆ ಏನೇನೊ ಆರೋಪ ಹೊರಿಸಿದರು. ಈಗ ಅದೇ ಕಾರಣಕ್ಕೆ ಸಂತೋಷ್ ಕೆಂಡ ಕೆಂಡವಾಗಿದ್ದಾರೆ.
ವರ್ತೂರ್ ಸಂತೋಷ್ ಹಾಗೂ ಬೆಂಕಿ ತನಿಷಾ ಈ ಇಬ್ಬರ ನಡುವೆ ಏನೊ ನಡೆದಿದೆ. ಎನ್ನುವ ಮಾತು ಬಿಗ್‌ಬಾಸ್ ಮನೆ ಒಳಗೆ ಇದ್ದಾಗಲೇ ಕೇಳಿಬಂದಿತ್ತು. ಹಾಗಂತ ಇಬ್ಬರೂ ಅಗತ್ಯಕ್ಕಿಂತ ಹೆಚ್ಚಾಗಿ ಹತ್ತಿರ ಆಗಿರಲಿಲ್ಲ. ಹಾಗಂತ ದೂರವೂ ಇರಲಿಲ್ಲ. ಒಂದು ಗಂಡು ಹೆಣ್ಣು ಹತ್ತಿರ ಇದ್ದಾಗ ಆಕರ್ಷಣೆ ಬೆಳೆಯುವುದು ಸಹಜ. ಅದನ್ನೇ ಹೊರಗಿದ್ದವರು ತಪ್ಪಾಗಿ ತಿಳಿದುಕೊಂಡರು. ಅದನ್ನೇ ಏನೋ ಇದೆ ಎನ್ನುವ ಅರ್ಥದಲ್ಲಿ ಮಾತಾಡಿದರು. ಅದಕ್ಕೆ ತನಿಷಾ ಹಾಗೂ ಸಂತೋಷ್ ಇಬ್ಬರೂ ಸ್ಪಷ್ಟ ಉತ್ತರ ಕೊಡಲಿಲ್ಲ. ಈಗ ಅದೇ ದೊಡ್ಡದಾಗಿದೆ.
ಸಂತೋಷ್ ಮೊದಲೇ ಹಳ್ಳಿ ಹುಡುಗ. ಅವರಿಗೂ ಕೋಪ ತಾಪ ಇರುತ್ತದೆ. ಹೀಗಾಗಿಯೇ ಅದನ್ನು ಅವರು ಬಾಯಿ ಬಿಟ್ಟು ಹೇಳಿದ್ದಾರೆ. ಕಟ್ಟಿಕೊಂಡ ಪತ್ನಿ ಈಗಲೂ ನನ್ನ ಮಾತು ಕೇಳಿ…ಬಂದರೆ ರಾಣಿ ಥರ ನೋಡಿಕೊಳ್ಳುತ್ತೇನೆ ಎಂದಿದ್ದರು. ಅದಕ್ಕೆ ಈಗಲೂ ಅವರು ಬದ್ದರಾಗಿದ್ದಾರೆ. ಆದರೆ ಇದನ್ನು ಸಹಿಸದ ಅಥವಾ ಒಪ್ಪದ ಅಥವಾ ಇನ್ನೊಂದು ಉದ್ದೇಶಕ್ಕಾಗಿಯೇ ಇವರ ಬದುಕಿನಲ್ಲಿ ಹುಳಿ ಹಿಂಡಲು ಸಜ್ಜಾಗಿದ್ಧಾರೆ ಕೆಲವರು. ಅವರಿಗೆ ಸಂತೋಷ್ ಹಾಗಿಗೇ ಮಾತಾಡಿಲ್ಲ. ಅಂತಿಂಥ ರೀತಿ ವಾರ್ನಿಂಗ್ ಕೊಟ್ಟಿಲ್ಲ. ನೋಡೋಣ ನಾನಾ ನೀವಾ ಎಂದು ತೊಡೆ ತಟ್ಟಿದ್ದಾರೆ. ಇಲ್ಲಿಂದಲೇ ಎದ್ದಿದೆ ಬಿರುಗಾಳಿ, ಸುಂಟರಗಾಳಿ.
ಸಂತೋಷ್ ಪಕ್ಕಾ ಗ್ರಾಮೀಣ ಪ್ರತಿಭೆ. ಇರುವಷ್ಟು ಜಾಗದಲ್ಲಿ, ಇರುವಷ್ಟು ಬದುಕಿನಲ್ಲಿ ಏನು ಮಾಡಬೇಕು ಅದನ್ನು ಮಾಡುತ್ತಿದ್ದಾರೆ. ಇನ್ನೊಬ್ಬರಿಗೆ ಕೆಟ್ಟದ್ದನ್ನು ಮಾಡುವ ಮನಸೂ ಇಲ್ಲ. ಅಂಥ ಉದ್ದೇಶ ಕೂಡ ಇಲ್ಲ. ಹೀಗಾಗಿಯೇ ಹುಲಿ ಉಗುರಿನ ಸತ್ಯವನ್ನು ಬಿಚ್ಚಿಟ್ಟು ಜೈಲು ಸೇರಬೇಕಾಯಿತು. ಒಬ್ಬ ಸಂತೋಷ್ ಮಾತ್ರ ಸತ್ಯ ಹೇಳಿ ಹದಿನೈದು ದಿನ ಕಣ್ಣೀರಿನಲ್ಲಿ ಕೈ ತೊಳೆದರು. ಅದನ್ನೆಲ್ಲ ಮರೆತು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಅದಕ್ಕೆ ಕಾಸು ಹಾಕಲು ತಯಾರಾಗಿದ್ಧಾರೆ. ಇದು ಗಟ್ಸ್ ಅಂದರೆ.
ಏನಾದರಾಗಲಿ, ಸಂತೋಷ್ ಈಗ ಹೊರ ಬಂದಿದ್ದಾರೆ. ಹಳ್ಳಿಕಾರ್ ಹೋರಿಗಳ ಜಾತ್ರೆ ಮಾಡಲು ಸಜ್ಜಾಗಿದ್ದಾರೆ. ಅದಕ್ಕಾಗಿ ಎಲ್ಲರನ್ನೂ ಒಂದು ಕಡೆ ಸೇರಿಸುತ್ತಿದ್ದಾರೆ. ಸುದೀಪ್ ಹಾಗೂ ಧ್ರು ಸರ್ಜಾ ಕೂಡ ಇದಕ್ಕೆ ಹಾಜರಿ ಹಾಕುವುದಾಗಿ ಹೇಳಿದ್ದಾರೆ. ಸಾವಿರಾರು ಜನರು ಸೇರಲಿದ್ದಾರೆ. ಇದರಿಂದ ಸಂತೋಷ್‌ಗೆ ಏನೇನೂ ಲಾಭ ಇಲ್ಲ. ಆದರೆ ಅದರಿಂದ ಜನರಿಗೆ ಲಾಭ ಆಗಲಿದೆ. ಮುಂದೊಂದು ದಿನ ಹಳ್ಳಿಕಾರ್ ಹೋರಿಗಳು ಇವರಿಂದ ಇನ್ನಷ್ಟು ಜನಪ್ರಿಯ ಆಗಲಿವೆ. ಅದನ್ನೇ ಇವರು ಬದುಕು ಮಾಡಿಕೊಂಡಿದ್ದಾರೆ. ಅದಕ್ಕೂ ಅಡ್ಡಗಾಲು ಹಾಕುವ ಜನರಿದ್ದರೆ ಅವರನ್ನು ಏನಂತ ಕರೆಯಬೇಕು ? ದೇವರೇ ಉತ್ತರ ಕೊಡುತ್ತಾನೆ ಬಿಡಿ ಸಮಯ ಬಂದಾಗ.