ಬಿಗ್ ಬಾಸ್ ಮನೆಯ (Bigg Boss Kannada) ಆಟ 5ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಕಾರ್ತಿಕ್ (Karthik Mahesh) ಮತ್ತು ಸಂಗೀತಾ (Sangeetha) ನಡುವೆ ಬಿರುಕು ಮೂಡಿದೆ. ಈ ಬೆನ್ನಲ್ಲೇ ಇಬ್ಬರ ಬಗ್ಗೆ ವರ್ತೂರು ಸಂತೋಷ್ (Varthur Santhosh) ಕಾಮೆಂಟ್‌ವೊಂದನ್ನ ಮಾಡಿದ್ದಾರೆ. ಸಂಗೀತಾಗೆ ಕಾರ್ತಿಕ್ ಟಿಶ್ಯೂ ಪೇಪರ್ ಇದ್ದಂತೆ ಎಂದು ಸಂತೋಷ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:Bigg Boss: ನಮ್ರತಾಗೆ ರೊಮ್ಯಾನ್ಸ್ ಬಗ್ಗೆ ಸ್ನೇಹಿತ್ ಸ್ಪೆಷಲ್ ಕ್ಲಾಸ್
ಬಿಗ್ ಮನೆಯ ಪ್ರೇಮ ಪಕ್ಷಿಗಳಾಗಿ ಹೈಲೆಟ್ ಆಗಿದ್ದ ಸಂಗೀತಾ-ಕಾರ್ತಿಕ್ ಜೋಡಿ ಈಗ ನಾ ದೂರ ನೀ ತೀರ ಎನ್ನುತ್ತಿದ್ದಾರೆ. ಇಬ್ಬರ ನಡುವೆ ಭಿನ್ನಭಿಪ್ರಾಯ ಮೂಡಿದೆ. ಹೀಗಿರುವಾಗ ಈ ತಂಡದಲ್ಲಿ ನಾನು ಇರೋಲ್ಲ, ವಿನಯ್ ಟೀಮ್‌ಗೆ ಹೋಗ್ತೀನಿ ಎಂದು ಸಂಗೀತಾ ಪಟ್ಟು ಹಿಡಿದಿರೋ ಬೆನ್ನಲ್ಲೇ ವರ್ತೂರು ಸಂತೋಷ್ ಅವರು ಸಂಗೀತಾ ಬಗ್ಗೆ ಡ್ಯಾಮೆಜಿಂಗ್ ಸ್ಟೇಟ್‌ಮೆಂಟ್‌ವೊಂದನ್ನ ಕೊಟ್ಟಿದ್ದಾರೆ.
ಸಂಗೀತಾ ಬಳಸಿ ಬೀಸಾಕುವ ಟಿಶ್ಯೂ ಪೇಪರ್ ಈ ಕಾರ್ತಿಕ್ ಎಂದು ಖಡಕ್ ಆಗಿ ತುಕಾಲಿ ಸಂತೂಗೆ ವರ್ತೂರು ಸಂತೋಷ್ ಹೇಳಿದ್ದಾರೆ. ಸಂಗೀತಾ ಸ್ಟ್ರಾಂಗ್ ಪ್ಲೇಯರ್, ಚೆನ್ನಾಗಿ ಆಡುತ್ತಾರೆ. ಆದರೆ ಕಾರ್ತೀಕ್ ಅವರಿಗೆ ಟಿಶ್ಯೂ ಪೇಪರ್ ಇದ್ದ ಹಾಗೆ ಎಂದಿದ್ದಾರೆ. ಅವರ ಮಾತಿಗೆ ತುಕಾಲಿ ಸಂತೂ ಕೂಡ ನಗುವಿನ ಮೂಲಕ ಸಮ್ಮತಿ ಸೂಚಿಸಿದ್ದಾರೆ.
ಒಟ್ನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಮನೆಮಂದಿಯ ಬಾಯಿಗೆ ಸಂಗೀತಾ ಮತ್ತು ಕಾರ್ತಿಕ್ ಜೋಡಿ ಆಹಾರವಾಗುತ್ತಿದ್ದಾರೆ. ವೈಯಕ್ತಿಕ ವಿಚಾರಗಳು ಮನೆಯ ಆಟಕ್ಕೆ ದಾಳವಾಗಿ ಕೆಲವರು ಬಳಸಿಕೊಳ್ಳುತ್ತಿದ್ದಾರೆ. ಈ ಹಾವು ಏಣಿ ಆಟದ ನಡುವೆ ಯಾರು ಗೆಲ್ಲುತ್ತಾರೆ ಕಾದುನೋಡಬೇಕಿದೆ.