ಹಳ್ಳಿಕಾರ್ ಸಂತೋಷ್ ಆಗಿದ್ದವರು ಈಗ ಬಿಗ್ ಬಾಸ್ (Bigg Boss Kannada 10) ವರ್ತೂರು ಸಂತೋಷ್ (Varthur Santhosh) ಆಗಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಸಾಲು ಸಾಲು ಕಾರ್ಯಕ್ರಮಗಳಿಗೆ ಗೆಸ್ಟ್ ಆಗಿ ವರ್ತೂರು ಸಂತೋಷ್ ಭಾಗಿಯಾಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಅವರಿಗೆ ರಾಜಕೀಯ ಎಂಟ್ರಿ ಬಗ್ಗೆ ಕೇಳಲಾಗಿದೆ.
ಬಿಗ್ ಬಾಸ್ ಫಿನಾಲೆ ತನಕ ಟಫ್ ಪೈಟ್ ಕೊಟ್ಟು ಜನರ ಪ್ರೀತಿ ಗೆದ್ದ ವರ್ತೂರುಗೆ ಸಿಕ್ಕಾಪಟ್ಟೆ ಜನ ಬೆಂಬಲವಿದೆ. ಹಾಗಾಗಿಯೇ ರಾಜಕೀಯಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ ವರ್ತೂರು ನೋ ಎಂದಿದ್ದಾರೆ. ಇದನ್ನೂ ಓದಿ:ಗಾಸಿಪ್‌ಗೆಲ್ಲಾ ಬ್ರೇಕ್, ‘ಅನಿಮಲ್’ ಸಕ್ಸಸ್ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
- Advertisement
- Advertisement
ನಾನು ರಾಜಕೀಯಕ್ಕೆ (Politics) ಬರಲ್ಲ. ಯಾವುದೇ ಪಕ್ಷ, ಸಂಘದ ಜೊತೆ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಜನರ ಸೇವೆ ಮಾಡಲು ರಾಜಕೀಯವೇ ಬೇಕೆಂದು ಇಲ್ಲ. ದೇವರ ಆಶೀರ್ವಾದ ಇದ್ದರೆ ಸಾಕು ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ಸದ್ಯ ಅವರ ಗಮನ ಇರೋದು ಹಳ್ಳಿಕಾರ್ ರೇಸ್ ಬಗ್ಗೆ ಇದು ಮಾರ್ಚ್‌ನಲ್ಲಿ ನಡೆಯಲಿದೆ. ಸುದೀಪ್, ಧ್ರುವ ಸರ್ಜಾ ಸೇರಿದಂತೆ ಬಿಗ್ ಬಾಸ್ ಕನ್ನಡ 10ರ ಸ್ಪರ್ಧಿಗಳು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಇದನ್ನೂ ಓದಿ:ದೇಹದ ತೂಕ ಇಳಿಸಿಕೊಂಡು ಸ್ಲಿಮ್ ಆದ ಸಪ್ತಮಿ
ಈ ವೇಳೆ ಜಗ್ಗೇಶ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಅದೆಲ್ಲಾ ಮುಗಿದು ಹೋದ ಕತೆ ಬಿಡಿ ಎಂದು ವರ್ತೂರು ಸಂತೋಷ್ ಮಾತನಾಡಿದ್ದಾರೆ. ವಿವಾದದ ಬಗ್ಗೆ ಏನೂ ಉತ್ತರಿಸದೇ, ಈ ವಿಚಾರ ಇಲ್ಲಿಗೆ ಬಿಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.