ರೈತ ವರ್ತೂರು ಸಂತೋಷ್ (Varthur Santhosh) ಬಿಗ್ ಬಾಸ್ ಮನೆಗೆ (Bigg Boss Kannada 10) ಕಾಲಿಟ್ಟ ಮೇಲೆ ಹೊರಗಡೆ ಅವರ ಹುಲಿ ಉಗುರಿನ ಕೇಸ್, ಮದುವೆಯ ಬಗ್ಗೆ ಖಾಸಗಿ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದವು. ಈಗ ಮೊದಲ ಬಾರಿಗೆ ತಮ್ಮ ಮದುವೆಯ ಬಗ್ಗೆ ವರ್ತೂರು ಸಂತೋಷ್ ಮೌನ ಮುರಿದಿದ್ದಾರೆ. ಪತ್ನಿಯಿಂದ ದೂರಾಗಿರೋ ಕಾರಣ ತಿಳಿಸಿದ್ದಾರೆ.
ಮದುವೆನೇ ಆಗಿಲ್ಲ ಅಂತ ಬಿಗ್ ಬಾಸ್ ಮನೆಯಲ್ಲಿ (Bigg Boss) ಸಂತೋಷ್ ಹೇಳಿದ್ದಾರೆ ಎಂದೇ ಸುದ್ದಿಯಾಗಿತ್ತು. ಮೊದಲ ಬಾರಿಗೆ ಬಿಗ್‌ಬಾಸ್ ಮನೆಯಲ್ಲಿ ತಮ್ಮ ಖಾಸಗಿ ಜೀವನದ ಬಗ್ಗೆ ವಿಶೇಷವಾಗಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ನಮ್ಮದು ಕೂಡು ಕುಟುಂಬ ನಾಲ್ಕರ ವಯಸ್ಸಿನಲ್ಲಿ ನಾನು ತಂದೆ ಕಳೆದುಕೊಂಡೆ, ಆದರೆ ನನ್ನ ದೊಡ್ಡಪ್ಪಂದಿರು ಯಾವುದಕ್ಕೂ ಕೊರತೆ ಮಾಡದೆ ನನ್ನನ್ನು ಬೆಳೆಸಿದರು. ಡಿಗ್ರಿ ಓದುತ್ತಿರುವಾಗಲೇ ನನಗೆ ಮನೆ ಜವಾಬ್ದಾರಿ ಬಂತು. ಆ ದನ ಕರು ಇಟ್ಕೊಂಡು ಜೀವನ ಮಾಡ್ತಿಯಾ ಎಂದವರಿಗೆ ವರ್ತೂರು ಉತ್ತರ ಕೊಟ್ಟಿದ್ದಾರೆ. ಆ ದನ ಕರುಯಿಂದಲೇ ಬೆಳೆದಿರೋದು. ಇಂದು ಈ ವೇದಿಕೆಗೆ ಬಂದಿರೋದು ಎಂದು ಮಾತನಾಡಿದ್ದಾರೆ.
ನನಗೆ ಮದುವೆ (Wedding) ಮಾಡುವ ವಯಸ್ಸು ಬಂದಾಗ, ನನ್ನ ದೊಡ್ಡಪ್ಪನಿಗೆ ಮಾತು ಕೊಟ್ಟಿದ್ದೆ ನೀವು ತೋರಿಸಿದ ಹುಡುಗಿಗೆ ತಾಳಿ ಕಟ್ಟುತ್ತೇನೆಂದು ಒಂದು ಕಡೆ ಹೆಣ್ಣು ನೋಡಲು ಹೋದರು. ಅವರು ಬಣ್ಣದ ಮಾತುಗಳಿಂದ ಮರಳು ಮಾಡಿದರು. ಒಳಗೆ ಫ್ರಾಡ್ ಆಗಿದ್ದು, ನಮ್ಮ ಮನೆಯವರಿಗೆ ಮರಳು ಮಾಡಿದರು. ಯಾರೇ ಹೆಣ್ಣು ನೋಡಲು ಹೋದಾಗ ಅಕ್ಕ-ಪಕ್ಕದ ಮನೆಯವರನ್ನು ವಿಚಾರಿಸಿ ಮುಂದುವರೆಯಬೇಕು. ನಾಟಕೀಯವಾಗಿ ಮಾತನಾಡುವವರನ್ನು ನಂಬಬೇಡಿ ಎಂದು ಪತ್ನಿ ಅವರ ಕುಟುಂಬಕ್ಕೆ ಸಂತೋಷ್ ತಿರುಗೇಟು ನೀಡಿದ್ದಾರೆ.
ಅಂದು ದೊಡ್ಡಪ್ಪನಿಗೆ ಕೊಟ್ಟ ಮಾತಿನಂತೆ ಆ ಹುಡುಗಿಯನ್ನು ಮದುವೆಯಾದೆ. ಆದರೆ ಆಕೆ ನನ್ನ ತಾಯಿಯನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದರು. ನಾನು ಕಷ್ಟ ಪಟ್ಟು ಸಂಪಾದಿಸಿದ ಜನರನ್ನು ಬಿಟ್ಟು ಬರಬೇಕು ಎಂದಳು. ಆದರೆ ಅದು ನನ್ನಿಂದ ಸಾಧ್ಯವಿಲ್ಲ ಎಂದು ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ಪೃಥ್ವಿರಾಜ್ ಸುಕುಮಾರನ್ ನಟನೆಯ ದಿ ಗೋಟ್ ಲೈಫ್ ಚಿತ್ರಕ್ಕೆ ರಿಲೀಸ್ ಡೇಟ್ ಫಿಕ್ಸ್
ಮದುವೆ ನಂತರ ಒಂದು ದಿನ ಅವರ ಮನೆಗೆ ಹೋದೆ. ಅವರ ಅಪ್ಪ ಇರಲಿಲ್ಲ. ನಾನು ಹೇಳಿದ ಷರತ್ತುಗಳಿಗೆ ಒಪ್ಪಿ ಬರುವುದಾದರೆ ನಿನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ ಎಂದು ನನ್ನ ಪತ್ನಿಗೆ ಹೇಳಿದೆ. ಆದರೆ ಆಕೆ ನಮ್ಮ ಅಪ್ಪ ಬರಲಿ ಎಂದರು. ಅವರಪ್ಪ ಬಂದ ಮೇಲೆ ನನಗೂ ಅವರಿಗೂ ಸಾಕಷ್ಟು ಮಾತುಕತೆ ಆಯ್ತು. ನನ್ನನ್ನು ಮನೆಯಿಂದ ಹೊರಗೆ ಹೋಗು ಎಂದು ಅವಮಾನ ಮಾಡಿದ್ದರು ಎಂದು ವರ್ತೂರು ಸಂತೋಷ್ ತಿಳಿಸಿದ್ದಾರೆ.
ಆಮೇಲೆ ಆ ಕುಟುಂಬದ ಜೊತೆ ಯಾವುದೇ ಮಾತುಕತೆ ಬೇಡ ಎಂದು ನಮ್ಮ ಕುಟುಂಬಕ್ಕೆ ತಿಳಿಸಿರೋದಾಗಿ ವರ್ತೂರು ಹೇಳಿದ್ದಾರೆ. ಅಲ್ಲದೇ, ಮತ್ತೊಬ್ಬರೊಟ್ಟಿಗೆ ಸ್ನೇಹದಲ್ಲಿರೋದಾಗಿಯೂ ಸಣ್ಣದೊಂದು ಸೂಚನೆ ನೀಡಿದ್ದಾರೆ. ಮಾನಸಿಕವಾಗಿ ನೊಂದಾಗ ಸಾಯುವ ಪರಿಸ್ಥಿತಿಯಲ್ಲಿದ್ದಾಗ ನೆರವಿಗೆ ಬಂದವರ ಬಗ್ಗೆ ನೆನೆದಿದ್ದಾರೆ ವರ್ತೂರು. ನಾನು ಈಗ ಮಾತನಾಡುತ್ತಿರುವುದನ್ನು ಆ ಫ್ರಾಡ್ ಕುಟುಂಬವೂ ನೋಡುತ್ತಿರುತ್ತದೆ. ನೋಡಲಿ ಅಂತಲೇ ನಾನು ಅವರಿಗೆ ಇಲ್ಲಿ ಉತ್ತರ ಕೊಡುತ್ತಿದ್ದೇನೆ ಎಂದು ತಮ್ಮ ಪತ್ನಿಯ ಕುಟುಂಬಕ್ಕೆ ಖಡಕ್ ಆಗಿ ವಾರ್ನ್ ನೀಡಿದ್ದಾರೆ ಸಂತೋಷ್.