ಮಂಡ್ಯ: ಕುರುಬ ಜನಾಂಗದವರು ಜೆಡಿಎಸ್ ಸೀಲ್‍ಗೆ ಸೇರುವುದಿಲ್ಲ, ನನ್ನ ಕತ್ತು ಕೊಯ್ದರು ನಾನು ಜೆಡಿಎಸ್ ಪರ ಮಾತನಾಡುವುದಿಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮೂಗನಕೊಪ್ಪಲು ಗ್ರಾಮದಲ್ಲಿ ನಡೆದ ಶ್ರೀ ಕನಕ ಸಮುದಾಯ ಭವನದ ಶಂಕು ಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೂ ಜೆಡಿಎಸ್ ಪಕ್ಷಕ್ಕೂ ಆಗಲ್ಲ. ನಾನು ಯಾವ ಪಕ್ಷದವನು ಅಲ್ಲ. ಇಂಡಿಪೆಂಡೆಂಟ್ ನಾನು, ನಾನು ಯಾರಿಗೂ ಕೇರ್ ಮಾಡಲ್ಲ. ನಾನು ನನ್ನ ಸಮಾಜಕ್ಕೆ ಮಾತ್ರ ಬೆಲೆ ಕೊಡುವುದು. ನನ್ನ ಅಭಿಮಾನಿಗಳು ಮಳವಳ್ಳಿಯಲ್ಲಿ ಸಾವಿರಾರು ಜನ ಇದ್ದಾರೆ. ಅವರೆಲ್ಲರೂ ಕಾಂಗ್ರೆಸ್‍ನವರೇ, ಅವರನ್ನು ನಾನು ಅನ್ನದಾನಿ ಬಳಿ ಹೋಗಿ ಎಂದಿದ್ದೆ. ಜೆಡಿಎಸ್ ಮುಖ ನೋಡಿಕೊಂಡು ಹೇಳಿಲ್ಲ, ಅನ್ನದಾನಿ ಮುಖ ನೋಡಿಕೊಂಡು ಹೇಳಿದ್ದು. ಜೆಡಿಎಸ್ ಪಕ್ಷಕ್ಕೆ ನನ್ನ ಕತ್ತು ಕೂಯ್ದರು ಹೇಳುವುದಿಲ್ಲ. ಅನ್ನದಾನಿ ಒಳ್ಳೆಯವನು ನನ್ನ ಒಳ್ಳೆಯ ಸ್ನೇಹಿತ ಎಂಬ ಕಾರಣಕ್ಕೆ ನಾನು ಹೇಳಿದ್ದೇನೆ ಅಷ್ಟೇ ಎಂದರು.
Advertisement
Advertisement
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎನ್ನುವುದು ಮುಖ್ಯವಲ್ಲ, ಸಮಾಜದ ಪರ ಯಾರು ಇರುತ್ತಾರೋ ಅವರ ಪರ ನಾವು ಇರಬೇಕು. ಸಿದ್ದರಾಮಯ್ಯ ಅವರನ್ನು ಈ ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಮಳವಳ್ಳಿಗೆ ಬರಲು ಇಷ್ಟ. ಆದರೆ ಮಳವಳ್ಳಿ ಬರದೆ ಇರದ ಹಾಗೆ ಮಾಡಿರುವುದೇ ಮಳವಳ್ಳಿ ಅವರೇ ಎಂದು ಸಿದ್ದರಾಮಯ್ಯ ಆಪ್ತ ಶಿವಣ್ಣ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಶಾರುಖ್ ಪುತ್ರ ಆರ್ಯನ್ ಇನ್ನೂ ಮಗು, ಉಸಿರಾಡಲು ಬಿಡಿ: ನಟ ಸುನೀಲ್ ಶೆಟ್ಟಿ
Advertisement
Advertisement
ಶಿವಣ್ಣನನ್ನು ಮನೆಯಿಂದ ಹೊರಗಡೆ ಹಾಕುವವರೆಗೆ ನಮ್ಮಪ್ಪರಾಣೆ ಸಿದ್ದರಾಮಯ್ಯ ಉದ್ಧಾರ ಆಗುವುದಿಲ್ಲ. ಸಿದ್ದರಾಮಯ್ಯ ಅವನು ಹೇಳಿದ ಹಾಗೆ ಕೇಳುತ್ತಾರೆ. ಅವನು ಹೇಳಿದ ಕಾರಣ ಸಿದ್ದರಾಮಯ್ಯ ಇಲ್ಲಿಗೆ ಬಂದಿಲ್ಲ. ಆತ ನಮ್ಮ ಜನಾಂಗದವರಿಗೆ ಸಹಾಯ ಮಾಡಿದರೆ, ನಾನು ಏಕೆ ಅನ್ನದಾನಿ ಬಗ್ಗೆ ಮಾತನಾಡುತ್ತಿದ್ದೆ ಎಂದರು. ಇದನ್ನೂ ಓದಿ: ಬೆಳಗಾವಿ ಲೋಕಸಭೆಯಿಂದ ನನ್ನ ಸ್ಪರ್ಧೆ ನಿಶ್ಚಿತ : ಸತೀಶ್ ಜಾರಕಿಹೊಳಿ
ಇನ್ನೂ ಬಂಡಯ್ಯಪ್ಪ ಕಾಶಂಪೂರ್ ಕುರಿತು ಮಾತನಾಡುವ ವೇಳೆ ವರ್ತೂರು ಪ್ರಕಾಶ್ ಹಾಸ್ಯ ಚಟಾಕಿ ಹಾರಿಸಿದರು. ಕಾಶಂಪೂರ್ ಬೀದರ್ ಜಿಲ್ಲೆಯವರು ಆರ್ಥಿಕವಾಗಿ ಚೆನ್ನಾಗಿ ಇದ್ದಾರೆ. ಅವರದ್ದು ಎಣ್ಣೆಯ ಫ್ಯಾಕ್ಟರಿ ಇದೆ, ಬಾಟಲು ತಯಾರು ಮಾಡುತ್ತಾರೆ. ಕನಕ ಭವನ ನಿರ್ಮಾಣಕ್ಕೆ ಹಣ ಕೊಡುತ್ತಾರೆ. ಅನ್ನದಾನಿ ಅವನನ್ನು ಬಿಡಬೇಡ ಎಂದು ಕಾಲೆಳೆದರು.