ಕೋಲಾರ: ಮಾಜಿ ಸಿದ್ದರಾಮಯ್ಯ (Siddaramaiah) ಅವರಿಗೆ ತಾಕತ್ ಇದ್ದರೆ ಕೋಲಾರದಿಂದ ಸ್ಪರ್ಧೆ ಮಾಡಬೇಕು. ಯಾವುದೇ ಕಾರಣಕ್ಕೂ ಯೂಟರ್ನ್ ಮಾಡದಂತೆ ಮಾಜಿ ಸಿಎಂ ಸಿದ್ದರಾಮಯ್ಯ ರವರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash) ಸವಾಲು ಹಾಕಿದ್ದಾರೆ.
Advertisement
ಕೋಲಾರ (Kolar) ದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜನವರಿ 9ರಂದು ಬಂದು ಹೋದ ಬಳಿಕ ಸಾಕಷ್ಟು ಹೇಳಿಕೆಗಳನ್ನು ನೀಡಲಾಗಿದ್ದು, ಅದರಲ್ಲೂ ಗಾಂಧಿ ನಗರ, ಕಾಗಿನೆಲೆ ಸಂಸ್ಥೆ ಸೇರಿದಂತೆ ಹಲವು ಕಡೆಗಳಿಂದ ಒತ್ತಡಗಳು ಹಾಕುತ್ತಿದ್ದಾರೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: ಫ್ಲೈಟ್‌ನಲ್ಲಿ ಕೇಕ್ ಕತ್ತರಿಸಿ ತಾಯಿಯ ಹುಟ್ಟುಹಬ್ಬ ಆಚರಿಸಿದ ಪೊಲೀಸ್ ಕಾನ್ಸ್‌ಟೇಬಲ್
Advertisement
Advertisement
ಆದರೆ ನನಗೆ ಯಾವುದೇ ಒತ್ತಡ ಬಂದಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ (BS Yediyurappa) ಸೇರಿದಂತೆ ಹಲವು ನಾಯಕರು ಸೋತಿದ್ದಾರೆ. ಸೋಲು ನನ್ನ ಗೆಲುವಿನ ಮೆಟ್ಟಲು, ಇನ್ನೂ ನಾನು ಸೋಲಲ್ಲ. ಯಾರೂ ಸಹ ನನ್ನ ಬಿಟ್ಟು ಹೋಗಿಲ್ಲ. ನಾನು ಬಿಜೆಪಿ ಸೇರಿದ ಬಳಿಕ ಗುಂಪು ಗುಂಪಾಗಿ ನಮ್ಮ ಪಕ್ಷಕ್ಕೆ ವಲಸೆ ಬರುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಬೇಡ ಎಂದು ಹೇಳುವ ಸಮಾಜದ ಯಾವುದೇ ನಾಯಕರು, ಸ್ವಾಮೀಜಿ ನನಗೆ ಧೈರ್ಯ ಮಾಡಿಲ್ಲ. ಸಿದ್ದರಾಮಯ್ಯ ಕೋಲಾರ ಕ್ಷೇತ್ರಕ್ಕೆ ಬರುತ್ತಾರೆ ಅನ್ನೋವರೆಗೂ ನನಗೆ ಅಭಿಮಾನ ಇತ್ತು ಎಂದು ಹೇಳಿದರು.
Advertisement
ಅವರು ಘೋಷಣೆ ಮಾಡಿದ ಮೇಲೆ ನಾನು ಸನ್ಯಾಸಿಯಾಗಕ್ಕೆ ಆಗಲ್ಲ. ನಾನು ರಾಜಕಾರಣ ಮಾಡಬೇಕಲ್ಲ ಅದಕ್ಕೆ. ಅವರು ನನ್ನ ವಿರುದ್ಧ ತೊಡೆತಟ್ಟಿದ್ದಾರೆ. ಕುರುಬ ಸಮಾಜದಲ್ಲಿ ಯಾವುದೇ ಬಿರುಕು ಇಲ್ಲ. ನನಗೆ ನಗರ ಪ್ರದೇಶದಲ್ಲಿ ಹೆಚ್ಚಿಗೆ ಬೆಂಬಲ ಇಲ್ಲ, ಹಳ್ಳಿ ಪ್ರದೇಶದಲ್ಲಿ ಇದೆ. ಇನ್ನೂ ನನಗೆ ಆನೆ ಬಲ ಬಂದಿದೆ. ಯಾಕಂದ್ರೆ ದಲಿತರು, ಗೊಲ್ಲ ಸಮಯದಾಯದವರು ಸಿದ್ದರಾಮಯ್ಯ ವಿರುದ್ಧ ಕರಪತ್ರಗಳನ್ನು ಹಂಚುತ್ತಿದ್ದಾರೆ. ಎ.ಕೃಷ್ಣಪ್ಪ, ವಿ.ಅರ್.ಪಾಟೀಲ್, ಶಿವಳ್ಳಿ ಹೀಗೆ ಸಾಕಷ್ಟು ನಾಯಕರಿಗೆ ಮೋಸ ಮಾಡಿದ್ದಾರೆ ಅವರು ಸುಮ್ಮನೆ ಬಿಡಲ್ಲ ಎಂದು ತಿಳಿಸಿದರು.
ಕೋಲಾರದಲ್ಲಿ ಬೆಂಕಿ ಇಟ್ಟಿದ್ದೀರಾ ಯಾವುದೇ ಕಾರಣಕ್ಕೂ ಯೂ ಟರ್ನ್ ಹೊಡೀಬೇಡಿ, ಅಹಿಂದ ಜನರು ಇರುವ ಜಿಲ್ಲೆಯಲ್ಲಿ ಬೆಂಕಿ ಹಾಕಿದ್ದೀರಿ ಎಂದು ಕಿಡಿಕಾರಿದ್ರು. ಹಾಲು ಕೊಡುವ ಕರು ನಿಖಿಲ್ ಕುಮಾರಸ್ವಾಮಿಯನ್ನ ಮುಗಿಸಿದ್ದೀರಿ. ಕುಮಾರಸ್ವಾಮಿ ಬಿಡ್ತಾರಾ, ಜೆಡಿಎಸ್, ವಕ್ಕಲಿಗರು ಇವರನ್ನ ಬಿಡ್ತಾರಾ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಸ್ವಯಂ ಪ್ರೇರಣೆಯಿಂದ ಇಲ್ಲಿಗೆ ಬರುತ್ತಿರುವುದು. ಪಾಪ ರಮೇಶ್ ಕುಮಾರ್ (Ramesh Kumar) ಒತ್ತಡ ಹಾಕಿಲ್ಲ. ಬೆಂಕಿ ಹಾಕಿದ್ಯಾ ನಿಂಗೆ ತಾಕತ್ ಇದ್ರೆ, ಯೂಟರ್ನ್ ಹೊಡೆಯಬೇಡ ಎಂದು ಸವಾಲು ಹಾಕಿದರು. ಅಲ್ಲದೆ ಸಿದ್ದರಾಮಯ್ಯ ಇಲ್ಲಿ ಮೂರನೇ ಸ್ಥಾನಕ್ಕೆ ಹೋಗುವುದು ಖಚಿತ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k