ಬೆಂಗಳೂರು: ವರ್ತೂರು ಕೋಡಿಯಲ್ಲಿ ಇಂದು ಸಹ ನೊರೆಯ ಅರ್ಭಟ ಮುಂದುವರೆದಿದೆ. ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೊರೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ರಸ್ತೆಗೆ ಹಾರುತ್ತಿರುವ ನೊರೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ನೊರೆಯ ಅರ್ಭಟದ ನಡುವೆಯೇ ವಾಹನ ಸವಾರರು ಸಾಗುತ್ತಿದ್ದಾರೆ. ಇದರಿಂದಾಗಿ ಸಾಂಕಾಮಿಕ ರೋಗಗಳು ಹರಡಬಹುದೆಂದು ಜನರು ಆತಂಕದಲ್ಲಿದ್ದಾರೆ.
Advertisement
Advertisement
ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಬೆಳ್ಳಂದೂರು ವಾರ್ಡ್‍ನ ಯುತೋಪಿಯಾ ಅಪಾರ್ಟ್ಮೆಂಟ್ ಕಾಂಪೌಂಡ್ ಗೋಡೆ ಕುಸಿದಿದ್ದು ಇಂದು ಮುಂಜಾನೆ ಮೇಯರ್ ಪದ್ಮಾವತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಹದೇವಪುರ ಜಂಟಿ ಆಯುಕ್ತೆ ವಾಸಂತಿ ಅಮರ್, ಬೆಳ್ಳಂದೂರು ವಾರ್ಡ್ ಕಾರ್ಪೋರೇಟರ್ ಆಶಾ ಸುರೇಶ್ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದರು.
Advertisement
Advertisement
ಈ ವೇಳೆ ತಂತ್ರಜ್ಞರು ಪರಿಶೀಲನೆ ನಡೆಸಿದ್ದು ಕಾಂಪೌಂಡ್ ಗೋಡೆ ಕುಸಿತದಿಂದ ಯುತೊಪಿಯಾ ಅಪಾರ್ಟ್‍ಮೆಂಟ್‍ಗೆ ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ. ಕಟ್ಟಡದ ಕಾಂಪೌಂಡ್ ಕುಸಿದ ಸ್ಥಳ ಮತ್ತು ಮಣ್ಣುಗೋಡೆ ಕುಸಿದ ಸ್ಥಳದಲ್ಲಿ ಸೂಕ್ತ ಬಂದೋಬಸ್ತ್ ಸಲಾರ್ ಪುರಿಯಾ ಸಂಸ್ಥೆ ನೆರವೇರಿಸಬೇಕು. ಅಲ್ಲಿವರೆಗೆ ಸಾಫ್ಟ್ ವೇರ್ ಪಾರ್ಕ್ ಕಾಮಗಾರಿ ನಿಲ್ಲಿಸುವಂತೆ ಆದೇಶಿಸಲಾಗಿದ್ದು, ಒಂದೊಮ್ಮೆ ಸಾಫ್ಟ್ ವೇರ್ ಪಾರ್ಕ್ ಕಟ್ಟಡ ಕಾಮಗಾರಿಯಲ್ಲಿ ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮೇಯರ್ ಪದ್ಮಾವತಿ ತಿಳಿಸಿದ್ದಾರೆ.