ವರ್ತೂ.. ದೂರದಿಂದ ಕೂಗಿ ಹೇಳೋ ಆಸೆ: ಮನ ಬಿಚ್ಚಿದ ನಟಿ ತನಿಷಾ ಕುಪ್ಪಂಡ

Public TV
1 Min Read
tanisha

ಬಿಗ್ ಬಾಸ್ (Bigg Boss) ಮನೆಯಲ್ಲಿ ವರ್ತೂರು ಸಂತೋಷ್ (Varthuru Santhosh) ಮತ್ತು ಬೆಂಕಿ ತನಿಷಾ ಕುಪ್ಪಂಡ (Tanisha Kuppanda) ಮಧ್ಯ ಏನೋ ನೆಡೀತಾ ಇದೆ ಎನ್ನುವುದು ಪಕ್ಕಾ ಆಗಿತ್ತು. ಆದರೆ, ಎಲ್ಲಿಯೂ ಅವರು ಅನುಮಾನ ಬರುವ ರೀತಿಯಲ್ಲಿ ನಡೆದುಕೊಳ್ಳಲಿಲ್ಲ. ಮನೆಯಿಂದ ಆಚೆ ಬಂದ ಮೇಲೂ ಅವರು ಹಾಗಿಲ್ಲ. ಆದರೆ, ಅವರ ನಡವಳಿಕೆ ಮಾತ್ರ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿವೆ. ಹಾಗಾಗಿ ವರ್ತೂರು ಹೆಸರು ಕೇಳಿ ಬಂದಾಗೆಲ್ಲ ತನಿಷಾ ಹೆಸರು ತಳುಕು ಹಾಕಿಕೊಳ್ಳುತ್ತೆ.

tanisha kuppanda 1

ಇಂತಹ ಫ್ರೆಂಡ್ ಶಿಪ್ ಬಗ್ಗೆ ಮತ್ತೆ ನೆನಪಿಸಿದ್ದಾರೆ ನಟಿ ತನಿಷಾ, ಇಂದು ವರ್ತೂರು ಸಂತೋಷ್ ಅವರ ಹುಟ್ಟು ಹಬ್ಬ (Birthday). ಅವರ ಹುಟ್ಟು ಹಬ್ಬಕ್ಕಾಗಿ ಸ್ಪೆಷಲ್ ಆಗಿಯೇ ತನಿಷಾ ವಿಶ್ ಮಾಡಿದ್ದಾರೆ. ನನ್ನ ಅಭಿಮಾನಿಗಳಲ್ಲಿ ನಾನೂ ಒಬ್ಬಳು. ಆ ಸಾಲಿನಲ್ಲಿ ನಿಂತು ದೂರದಿಂದ ನಿಮ್ಮ ಹುಟ್ಟು ಹಬ್ಬಕ್ಕೆ ಜೋರಾಗಿ ಕೂಗಿ ವಿಶ್ ಮಾಡುವ ಆಸೆ  ಎಂಬುದನ್ನು ಬರೆದುಕೊಂಡಿದ್ದಾರೆ. ವರ್ತೂರು ಜೊತೆಗಿರೋ ಫೋಟೋ ಹಂಚಿಕೊಂಡು, ಹಾರ್ಟ್ ಸಿಂಬಲ್ ಕೂಡ ಹಾಕಿದ್ದಾರೆ.

Tanisha Kuppanda 4

ನಿನ್ನೆ ರಾತ್ರಿಯಿಂದಲೇ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಂತೋಷ್ ಮನೆಮುಂದೆ ಮಧ್ಯೆ ರಾತ್ರಿಯಿಂದಲೇ ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ಸ್ಪರ್ಧಿಯ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.

Varthur Santhosh 2

ಸಂತೋಷ್ ಹುಟ್ಟು ಹಬ್ಬಕ್ಕೆಂದು ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಬಂದಿದ್ದು, ಅವರಿಗಾಗಿ ಊಟದ ವ್ಯವಸ್ಥೆಯನ್ನು ಸಂತೋಷ್ ಮಾಡಿದ್ದರು. ನಾಲ್ಕು ಬಗೆಯ ಆಹಾರವನ್ನು ನಾಲ್ಕು ಸಾವಿರ ಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಾರ, ತುರಾಯಿ ಹಿಡಿದುಕೊಂಡು ಬಂದಿದ್ದ ಅಭಿಮಾನಿಗಳು ಭರ್ಜರಿ ಊಟ ಸವಿದರು.

 

ಬಿಗ್ ಬಾಸ್ ಸ್ಪರ್ಧಿಗಳು ಕೂಡ ವರ್ತೂರು ಸಂತೋಷ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅನೇಕರು ಕರೆ ಮಾಡಿ ವಿಶ್ ಮಾಡಿದ್ದರೆ, ಇನ್ನೂ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. ಕೆಲವರು ಇಂದು ನೇರವಾಗಿ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Share This Article