ಮುಂಬೈ: (Mumbai) ಸಮಾಜದ ಹಿತದೃಷ್ಟಿಯಿಂದ ಯೋಚಿಸುವ ಪ್ರತಿಯೊಬ್ಬರೂ ‘ವರ್ಣ’ ಮತ್ತು ‘ಜಾತಿ’ ವ್ಯವಸ್ಥೆಯು ಹಳೇ ವಿಷಯ ಎಂದು ಹೇಳಬೇಕು. ಎಲ್ಲರೂ ಅದನ್ನು ಮರೆಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವರ್ಣ, ಜಾತಿ ಪರಿಕಲ್ಪನೆಗಳನ್ನು ಮರೆತುಬಿಡಬೇಕು. ಇಂದು ಯಾರಾದರೂ ಅದರ ಬಗ್ಗೆ ಕೇಳಿದರೆ, ಸಮಾಜದ ಹಿತಾಸಕ್ತಿಯಿಂದ ಯೋಚಿಸುವ ಪ್ರತಿಯೊಬ್ಬರೂ ಇದು ಹಳೇ ವಿಷಯ ಎಂದು ಹೇಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟ್ರಕ್‍ಗೆ ಬಸ್ ಡಿಕ್ಕಿ – ಬೆಂಕಿ ಹೊತ್ತಿ 11 ಸಾವು, 38 ಮಂದಿಗೆ ಗಾಯ
Advertisement
Advertisement
ಅಲ್ಪಸಂಖ್ಯಾತರನ್ನು ಅಪಾಯಕ್ಕೆ ಸಿಲುಕಿಸುವುದು ಸಂಘ ಅಥವಾ ಹಿಂದೂಗಳ ಸ್ವಭಾವವಲ್ಲ. ಆರ್‌ಎಸ್‌ಎಸ್ ಸಹೋದರತ್ವದ ಪರವಾಗಿ ನಿಲ್ಲಲು ನಿರ್ಧರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
Advertisement
ನಮ್ಮಿಂದಾಗಲಿ ಅಥವಾ ಹಿಂದೂಗಳಿಂದಾಗಲಿ ಅಪಾಯವಿದೆ ಎಂದು ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಲಾಗುತ್ತಿದೆ. ಇದು ಹಿಂದೆಯೂ ಆಗಿಲ್ಲ, ಮುಂದೆಯೂ ಆಗುವುದಿಲ್ಲ. ಇದು ಸಂಘದ ಅಥವಾ ಹಿಂದೂಗಳ ಸ್ವಭಾವವಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದರಸಾದಲ್ಲಿ 1985ರಿಂದಲೂ ಪೂಜೆ ಇತ್ತು, ಪೊಲೀಸರ ಅನುಮತಿ ಸಿಕ್ಕಿತ್ತು: ಹಿಂದೂ ಮುಖಂಡರ ಸ್ಪಷ್ಟನೆ
Advertisement
ದ್ವೇಷವನ್ನು ಹರಡುವ, ಅನ್ಯಾಯ, ದೌರ್ಜನ್ಯ ಎಸಗುವ, ಸಮಾಜದ ಮೇಲೆ ಗೂಂಡಾಗಿರಿ ಮತ್ತು ದ್ವೇಷದ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ನಮ್ಮದೇ ಆದ ಆತ್ಮರಕ್ಷಣೆ ಮತ್ತು ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಲ್ಲಿ ಯಾವ ಬೆದರಿಕೆಯೂ ಇಲ್ಲ. ಹಿಂದೂ ಸಮಾಜವು ಪ್ರಸ್ತುತ ಕಾಲದ ಅಗತ್ಯವಾಗಿದೆ. ಇದು ಯಾರ ವಿರೋಧಿಯೂ ಅಲ್ಲ. ಸಹೋದರತ್ವ, ಸೌಹಾರ್ದತೆ ಮತ್ತು ಶಾಂತಿಯನ್ನು ಸಂಘ ಪ್ರತಿಪಾದಿಸುತ್ತದೆ ಎಂದಿದ್ದಾರೆ.