CinemaLatestMain PostSouth cinema

`ವಾರಿಸು’ಗಾಗಿ ವಿಜಯ್ ಥಳಪತಿ ಜೊತೆ ಸೊಂಟ ಬಳುಕಿಸಿದ ರಶ್ಮಿಕಾ

ನ್ನಡದ ಚಸ್ಮಾ ಸುಂದರಿ ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ(Rashmika Mandanna), ಇದೀಗ ಸೌತ್ ಮತ್ತು ನಾರ್ತ್ ಇಂಡಸ್ಟ್ರಿಯಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಚಾನ್ಸ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯ `ವಾರಿಸು’ (Varisu)  ಸಿನಿಮಾಗಾಗಿ ವಿಜಯ್ ಜೊತೆ ಸೊಂಟ ಬಳುಕಿಸಿದ್ದಾರೆ.

 `ವಾರಿಸು'ಗಾಗಿ ವಿಜಯ್ ಥಳಪತಿ ಜೊತೆ ಸೊಂಟ ಬಳುಕಿಸಿದ ರಶ್ಮಿಕಾ

ಪ್ಯಾನ್ ಇಂಡಿಯಾ ಸಿನಿಮಾ `ಪುಷ್ಪ'(Pushpa) ಶ್ರೀವಲ್ಲಿಯಾಗಿ ಗೆದ್ದಿರುವ ರಶ್ಮಿಕಾ ಮಂದಣ್ಣ, ಸದ್ಯ `ವಾರಿಸು'(Varisu) ಚಿತ್ರದ ವಿಷ್ಯವಾಗಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಸೂಪರ್ ಸ್ಟಾರ್ ವಿಜಯ್ ಜೊತೆ ನಟಿಸಬೇಕು ಎಂಬುದು ರಶ್ಮಿಕಾ ಕನಸಾಗಿತ್ತು. ಅದೀಗ ನನಸಾಗಿದೆ. ವಿಜಯ್‌ಗೆ(Vijay) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ವಿಜಯ್ ಜೊತೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ:ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದಿತ್ತು – ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್‌

 `ವಾರಿಸು'ಗಾಗಿ ವಿಜಯ್ ಥಳಪತಿ ಜೊತೆ ಸೊಂಟ ಬಳುಕಿಸಿದ ರಶ್ಮಿಕಾ

`ವಾರಿಸು’ ಚಿತ್ರದ ರಂಜಿತಮೆ ಸಾಂಗ್‌ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ವಿಜಯ್ ಜೊತೆ ಹಾಟ್ ಆಗಿ ಕಾಣಿಸಿಕೊಂಡು ರಶ್ಮಿಕಾ ಸೊಂಟ ಬಳುಕಿಸಿರೋದು ಫ್ಯಾನ್ಸ್‌ಗೆ ಖುಷಿಕೊಟ್ಟಿದೆ. ಸಾಂಗ್ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲ್ಲೇ ವೀಕ್ಷಣೆ ಪಡೆದಿದೆ.

`ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಹೆಜ್ಜೆ ಹಾಕಿದ್ದ ಸಾಮಿ ಸಾಂಗ್ ಭರ್ಜರಿ ಹಿಟ್ ಆಗಿತ್ತು. ಇದೀಗ `ವಾರಿಸು’ ಚಿತ್ರದ ಸಾಂಗ್‌ಗೆ ಅದ್ಬುತ ರೆಸ್ಪಾನ್ಸ್ ಸಿಗುತ್ತಿದೆ. ಇನ್ನೂ ಈ ಸಿನಿಮಾ 2023ರಲ್ಲಿ ತೆರೆಗೆ ಅಪ್ಪಳಿಸಲಿದೆ.

Live Tv

Leave a Reply

Your email address will not be published. Required fields are marked *

Back to top button