ಕಾಲಿವುಡ್ ನಟ ದಳಪತಿ ವಿಜಯ್‌ಗೆ 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ದಳಪತಿ ವಿಜಯ್ ನಟನೆಯ ಮುಂಬರುವ 66ನೇ ಚಿತ್ರದ ಲುಕ್ ಮತ್ತು ಟೈಟಲ್ ಅನ್ನು ರಿವೀಲ್ ಮಾಡಿದೆ ಚಿತ್ರತಂಡ. ಸದ್ಯ ವಿಜಯ್ ನಟನೆಯ ನಯಾ ಲುಕ್ ನೋಡುಗರನ್ನ ಸಿಕ್ಕಾಪಟ್ಟೆ ಅಟ್ರಾಕ್ಟ್ ಮಾಡುತ್ತಿದೆ.
#Varisu pic.twitter.com/b2bwNNAQP8
— Vijay (@actorvijay) June 21, 2022
`ಬೀಸ್ಟ್’ ಸೋಲಿನ ನಂತರ ದಳಪತಿ ವಿಜಯ್ ನಟನೆಯ ಮುಂದಿನ ಚಿತ್ರದ ಟೈಟಲ್ ಅನೌನ್ಸ್ ಆಗಿದೆ. ಸೂಪರ್ ಸ್ಟಾರ್ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ ಜತೆ ವಿಜಯ್ ಲುಕ್ ಕೂಡ ರಿವೀಲ್ ಆಗಿದೆ. `ವಾರಿಸು’ ಚಿತ್ರದ ಟೈಟಲ್ ಮೂಲಕ ವಿಜಯ್ ಸದ್ದು ಮಾಡ್ತಿದ್ದಾರೆ. ವಾರಿಸು ಎಂದರೆ ವಾರಸುದಾರ ಎಂಬ ಅರ್ಥವಿದೆ. `ವಾರಿಸು’ ಟೈಟಲ್ ಜತೆ ದಿ ಬಾಸ್ ರಿಟನ್ಸ್ ಎಂಬ ಅಡಿಬರಹವಿದೆ. ಇದನ್ನೂ ಓದಿ: ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?
`ವಾರಿಸು’ ಚಿತ್ರದಲ್ಲಿನ ವಿಜಯ್ ಲುಕ್ಕಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜಭಂಗಿಯಲ್ಲಿ ಕುಳಿತಿರುವ ವಿಜಯ್, ದುಬಾರಿ ಸೂಟ್ ಧರಿಸಿ ಮಿಂಚಿದ್ದಾರೆ. ಇದೀಗ ʻವಾರಿಸುʼ ಚಿತ್ರದ ಸೆಕೆಂಡ್ ಲುಕ್ ಕೂಡ ರಿವೀಲ್ ಮಾಡಿದೆ. ಈ ಸಿನಿಮಾಗೆ ವಂಶಿ ಪೈಡಿಪಲ್ಲಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ವಿಜಯ್ ತಾಯ್ನಾಡಿಗೆ ಹಿಂದಿರುಗುವ ಶ್ರೀಮಂತ ಕುಟುಂಬದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಜಯ್‌ಗೆ ಜೋಡಿಯಾಗಿ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
Live Tv