Connect with us

Latest

ಯೋಧರಿಗಾಗಿ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ ದೇಶಭಕ್ತ

Published

on

ಲಕ್ನೋ: ಯೋಧರೆಂದರೆ ಎಲ್ಲರಿಗೂ ವಿಶೇಷ ಗೌರವಿರುತ್ತದೆ. ದೇಶವಾಸಿಗಳಿಗಾಗಿ, ದೇಶಕ್ಕಾಗಿ ಶತ್ರುಗಳೊಂದಿಗೆ ಹೋರಾಡಿ ಜೀವತ್ಯಾಗ ಮಾಡುವ ಯೋಧರಿಗಾಗಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಗುಂಡೇಟನ್ನು ತಡೆಯಬಲ್ಲ ವಿಶೇಷ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ್ದಾರೆ.

ವಾರಣಾಸಿಯ ಶಾಮ್ ಚೌರಾಸಿಯಾ ಅವರು ಈ ಐರನ್ ಮ್ಯಾನ್ ಸೂಟನ್ನು ಯೋಧರಿಗಾಗಿ ತಯಾರಿಸಿದ್ದಾರೆ. ಶಾಮ್ ಅವರು ಅಶೋಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಆ್ಯಂಡ್ ಮ್ಯಾನೇಜ್ಮೆಂಟ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭಾರತೀಯ ಸೇನೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಸೂಟ್ ತಯಾರು ಮಾಡಿದ್ದಾರೆ. ಯೋಧರು ದೇಶದ ಸೂಪರ್ ಹೀರೋಗಳು ಎಂದು ವಿಶೇಷ ರೀತಿಯಲ್ಲಿ ಪ್ರೀತಿ ಮೆರೆದಿದ್ದಾರೆ. ಇದನ್ನೂ ಓದಿ:ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿ- ವಿಶೇಷತೆ ಏನು? ಬೆಲೆ ಎಷ್ಟು?

ಈ ಐರನ್ ಮ್ಯಾನ್ ಸೂಟ್ ಲೋಹದಿಂದ ತಯಾರಿಸಿದ ಕವಚವಾಗಿದ್ದು, ಇದು ಭಾರತೀಯ ಯೋಧರನ್ನು ಭಯೋತ್ಪಾದಕರು ಹಾಗೂ ಶತ್ರುಗಳಿಂದ ರಕ್ಷಿಸಲಿದೆ. ಸದ್ಯ ಶ್ಯಾಮ್ ಅವರು ಡೆಮೋ ಪೀಸ್ ತಯಾರಿಸಿದ್ದಾರೆ. ಇದು ಟಿನ್‍ನಿಂದ ಮಾಡಲಾಗಿದೆ. ಈ ಕವಚ ಯುದ್ಧದ ಸಂದರ್ಭದಲ್ಲಿ ಯೋಧರಿಗೆ ಬಹಳ ಸಹಾಯವಾಗಲಿದೆ. ಇದರಲ್ಲಿ ಗೇರ್ಸ್ ಹಾಗೂ ಮೋಟರ್ ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಇದರಲ್ಲೊಂದು ಮೊಬೈಲ್ ಕನೆಕ್ಷನ್, ಸೆನ್ಸರ್ ಗಳನ್ನೂ ಅಳವಡಿಸಲಾಗಿದೆ. ಈ ಸೆನ್ಸರ್ ಶತ್ರುಗಳು ದಾಳಿ ನಡೆಸುವ ಮುನ್ನ ಯೋಧರನ್ನು ಎಚ್ಚರಿಸುತ್ತದೆ ಎಂದು ಶ್ಯಾಮ್ ತಿಳಿಸಿದ್ದಾರೆ.

ಸದ್ಯ ನಾನು ಡೆಮೋ ಪೀಸ್ ತಯಾರಿಸಿದ್ದೇನೆ. ಹಣ ಅಭಾವ ಇರುವುದರಿಂದ ಇದನ್ನು ಅಭಿವೃದ್ಧಿಗೊಳಿಸಲು ಕೊಂಚ ಸಮಯವಾಗುತ್ತಿದೆ. ಆದರೆ ನಾನು ಯೋಧರಿಗಾಗಿ ಐರನ್ ಮ್ಯಾನ್ ಸೂಟನ್ನು ಇನ್ನಷ್ಟು ಅಭಿವೃದ್ಧಿಗೊಳಿಸುತ್ತೇನೆ. ಹಾಲಿವುಡ್ ಚಿತ್ರಗಳಲ್ಲಿ ಐರನ್ ಮ್ಯಾನ್ ನೋಡಿ ನನಗೆ ಈ ಐಡಿಯಾ ಬಂತು. ಇದು ನಮ್ಮ ದೇಶ ಕಾಯುವ ಹೆಮ್ಮೆಯ ಯೋಧರಿಗಾಗಿ ನನ್ನದೊಂದು ಪುಟ್ಟ ಪ್ರಯತ್ನ ಎಂದು ಶ್ಯಾಮ್ ಹೇಳಿದ್ದಾರೆ.

ಶತ್ರುನಾಶಕ್ಕೆ ಇದು ಸಹಾಯಕಾರಿ, ಯೋಧರ ಶಕ್ತಿಯನ್ನು ಇದು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿ ಸರ್ಕಾರಿ ಏಜೆನ್ಸಿ ಈ ಬಗ್ಗೆ ಗಮನವಹಿಸಬೇಕು. ಯೋಧರಿಗಾಗಿ ಇವುಗಳನ್ನು ತಯಾರಿಸಲು ಯೋಜನೆ ಹಾಕಿಕೊಳ್ಳಬೇಕು ಎಂದು ಡಿಆರ್‌ಡಿಒ ಹಾಗೂ ಇತರೆ ಸರ್ಕಾರಿ ಏಜೆನ್ಸಿ ಬಳಿ ವಿನಂತಿಸಿದ್ದಾರೆ.

Click to comment

Leave a Reply

Your email address will not be published. Required fields are marked *