ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತುಮಕೂರು ಜಿಲ್ಲೆಯ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಪ್ರಾತಃ ಕಾಲದಿಂದಲೇ ಅಭಿಷೇಕಾಧಿಗಳು, ಪೂಜೆಗಳು ನೇರವೇರುತಿದೆ.
ನೂರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ನಿಂತು ಶ್ರೀ ಮಹಾಲಕ್ಷ್ಮಿ ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗೆ ಮಹಾಮಂಗಳಾರತಿ ನೇರವೇರಲಿದ್ದು, ಪೂಜಾ ತಯಾರಿ ನಡೆಯುತ್ತಿದೆ. ಕಳೆದ ಎರಡು ವರ್ಷದಿಂದ ದೇವಸ್ಥಾನ ಸರ್ಕಾರದ ಸುಪರ್ದಿಗೆ ಹೋಗಿದ್ದರಿಂದ ಭಕ್ತಾಧಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಪೂಜೆಗೆ ಹೂ ಖರೀದಿಗೆ ಬಂದು ಹಣ್ಣಿನ ವ್ಯಾಪಾರಿ ಜೊತೆಗೆ ಜಗಳ
ಹತ್ತಾರು ಸಾವಿರ ಸಂಖ್ಯೆಯಲ್ಲಿ ಭಕ್ತಾಧಿಗಳಿಂದ ತುಂಬಿ ಥುಳುಕುತ್ತಿದ್ದ ಗೋರವನಹಳ್ಳಿ ಲಕ್ಷಿ ದೇವಾಲಯದ ಆವರಣದಲ್ಲಿ ಭಕ್ತಾಧಿಗಳ ಬರುವಿಕೆಯಲ್ಲಿ ಇಳಿಮುಖ ಕಂಡುಬರುತ್ತಿದೆ. ಸರಿಯಾದ ಪ್ರಚಾರ, ಮೂಲ ಸೌಲಭ್ಯ ಇಲ್ಲದೆ ಇದ್ದುದರಿಂದ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv