ಬೆಂಗಳೂರು: ಎಲ್ಲೆಡೆ ವರಮಹಾಲಕ್ಷ್ಮಿ (Varamahalakshmi Festival) ಹಬ್ಬದ ಸಂಭ್ರಮ ಮನೆ ಮಾಡಿದೆ. ಶುಭ ಶುಕ್ರವಾರದ ದಿನ ಇಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಬರುವ ಮಹಿಳಾ ಭಕ್ತರಿಗೆ ವಿಶೇಷ ಹಬ್ಬದ ಉಡುಗೊರೆಯೊಂದು ಕಾದಿದೆ.
ಇಂದು ಲಕ್ಷ್ಮಿ ದೇವಿಯನ್ನು ಆರಾಧಿಸುವ ಮುತ್ತೈದೆಯರೇ ಆಚರಿಸುವ ವಿಶೇಷವಾದ ವೃತ ವರಮಹಾಲಕ್ಷ್ಮಿ ಹಬ್ಬದ ಸಡಗರ. ಮನೆ ಮನೆಯಲ್ಲಿ ಸುಮಂಗಲಿಯರ ಸಡಗರ, ಸಂಪತ್ತಿನ ಅಧಿದೇವತೆ ದರ್ಶನಕ್ಕಾಗಿ ಹೋಗುವ ಮಹಿಳಾ ಭಕ್ತರಿಗೆ ದೇಗುಲದಲ್ಲಿ ವಿಶೇಷ ಉಡುಗೊರೆ ಸಿಗಲಿದೆ. ಹೌದು, ಇಂದು ರಾಜ್ಯದ ಎಲ್ಲಾ ಮುಜರಾಯಿ ದೇಗುಲದಲ್ಲಿಯೂ ಮಹಿಳಾ ಭಕ್ತರಿಗಾಗಿ ಅರಿಶಿನ, ಕುಂಕುಮ, ಬಳೆ, ಕಣವನ್ನು ಕೊಡಲಾಗುತ್ತದೆ. ಮುಜರಾಯಿ ಇಲಾಖೆ ಈಗಾಗಲೇ ಈ ಬಗ್ಗೆ ಸುತ್ತೋಲೆ ಕೂಡ ಹೊರಡಿಸಿದೆ. ಇದನ್ನೂ ಓದಿ: ಬೆಂಗಳೂರಿಗೆ ಮೋದಿ ಆಗಮನ ಹಿನ್ನೆಲೆ ಸಂಚಾರದಲ್ಲಿ ಬದಲಾವಣೆ
ಈಗಾಗಲೇ ಬೆಂಗಳೂರಿನ ಬನಶಂಕರಿ ದೇಗುಲ ಸೇರಿದಂತೆ ಮುಜರಾಯಿ ದೇಗುಲದಲ್ಲಿ ಇಂದು ಪೂಜೆಗೆ ಎಲ್ಲಾ ಸಿದ್ಧತೆ ಮಾಡಲಾಗಿದ್ದು, ಮಹಿಳಾ ಭಕ್ತರಿಗೆ ಕೊಡುವ ಎಲ್ಲಾ ಅರಿಶಿನ, ಕುಂಕುಮ, ಬಳೆಗಳ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಬರುವಂತಹ ಭಕ್ತರಿಗೆ ಇದನ್ನು ವಿತರಣೆ ಮಾಡಲಾಗುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೆ ದೇಗುಲಕ್ಕೆ ಬರುವ ಮಹಿಳಾ ಭಕ್ತರಿಗೆ ಉಡುಗೊರೆ ಕೊಡಲಾಗುತ್ತದೆ.
ಮುತ್ತೈದೆಯರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುವ ವರಮಹಾಲಕ್ಷ್ಮಿ ಹಬ್ಬದಂದು ನಿಜಕ್ಕೂ ದೇಗುಲದಲ್ಲಿ ಸಿಗುವ ಉಡುಗೊರೆ ಅತ್ಯಂತ ಅಮೂಲ್ಯವಾಗಲಿದೆ ಎಂಬುದು ಭಕ್ತರ ಆಶಯ. ಇದನ್ನೂ ಓದಿ: ನಿಮ್ಮ ಸಾಮರ್ಥ್ಯ, ಅಸಾಧಾರಣ ಕೌಶಲ್ಯವನ್ನ ಜಗತ್ತಿಗೆ ತೋರಿಸಿದ್ದೀರಿ – ಪ್ರಜ್ಞಾನಂದಗೆ ಮೋದಿ ಅಭಿನಂದನೆ
ಮಾರುಕಟ್ಟೆಯಲ್ಲಿ ಖರೀದಿ ಜೋರು
ಸಾಮಾನ್ಯವಾಗಿ ಹಬ್ಬದ ದಿನಗಳಂದು ಖರೀದಿ ಭರಾಟೆ ಜೋರಾಗಿರುತ್ತದೆ. ಅಲ್ಲದೇ ಹೂ, ಹಣ್ಣು ಅಗತ್ಯ ವಸ್ತುಗಳ ಬೆಲೆಯಲ್ಲಿ ದುಪ್ಪಟ್ಟಾಗಿರುತ್ತದೆ. ಅಂತೆಯೇ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ಹೂ, ಹಣ್ಣು ಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ಯಾವುದು, ಎಷ್ಟು ದರ?
ಕನಕಾಂಬರ – 10 ಮೊಳ (ಒಂದು ಕುಚ್ಚು) 400 ರೂ., ಮಲ್ಲಿಗೆ ಕುಚ್ಚು- 500 ರಿಂದ 600 ರೂ., ಗುಲಾಬಿ- 150 ರಿಂದ 200 ರೂ., ಚಿಕ್ಕ ಹೂವಿನ ಹಾರ- 200 ರೂ., ದೊಡ್ಡ ಹೂವಿನ ಹಾರ- 400 ರಿಂದ 500 ರೂ., ತಾವರೆ ಹೂ- ಜೋಡಿಗೆ 50 ರಿಂದ 100 ರೂ., ಚೆಂಡುಹೂ- ಒಂದು ಕುಚ್ಚು 200 ರೂ., ತೋಮಾಲೆ- 1000 ರೂ., ಚೆಂಡು ಹೂವಿನ ಚಿಕ್ಕ ಹಾರ- 100 ರೂ., ಮಲ್ಲಿಗೆ ಹಾರ- 200 ರಿಂದ 400 ರೂ.
Web Stories