– ಗಡೀಪಾರು ತಪ್ಪಿಸಲು ಪ್ಲ್ಯಾನ್ ಮಾಡಿದ್ದ ಲಲಿತ್ ಮೋದಿ
ಪೋರ್ಟ್ ವಿಲಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸುವಂತೆ ವನವಾಟು ಪ್ರಧಾನಿ ಜೋಥಮ್ ನಪತ್ ಪೌರತ್ವ ಆಯೋಗಕ್ಕೆ ಆದೇಶಿಸಿದ್ದಾರೆ.
ಮೋದಿಯವರ ವನವಾಟು ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಗಳನ್ನು ತಕ್ಷಣವೇ ಪ್ರಾರಂಭಿಸಲು ನಾನು ಪೌರತ್ವ ಆಯೋಗಕ್ಕೆ ಸೂಚಿಸಿದ್ದೇನೆ ಎಂದು ನಪತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲಲಿತ್ ಮೋದಿಗೆ ಎಚ್ಚರಿಕೆ ನೋಟಿಸ್ ಹೊರಡಿಸಬೇಕೆಂಬ ಮನವಿಯನ್ನು ಇಂಟರ್‌ಪೋಲ್ ಎರಡು ಬಾರಿ ತಿರಸ್ಕರಿಸಿದೆ. ಅವರ ಹಿನ್ನೆಲೆ ಪರಿಶೀಲಿಸಿದಾಗಲೂ ಯಾವುದೇ ಅಪರಾಧ ಶಿಕ್ಷೆ ಕಂಡುಬಂದಿಲ್ಲ ಎಂದಿದ್ದು, ಅವರ ಅರ್ಜಿಯನ್ನು ರದ್ದು ಮಾಡುವಂತೆ ಸೂಚಿಸಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ವನವಾಟು ಪಾಸ್‌ಪೋರ್ಟ್ ಒಂದು ಸವಲತ್ತು ಅಷ್ಟೆ. ಅದು ಹಕ್ಕಲ್ಲ. ಅರ್ಜಿದಾರರು ಪೌರತ್ವಕ್ಕಾಗಿ ಕಾನೂನುಬದ್ಧ ಕಾರಣಗಳನ್ನು ಒದಗಿಸಬೇಕು. ಆ ಕಾನೂನುಬದ್ಧ ಕಾರಣಗಳಲ್ಲಿ ಹಸ್ತಾಂತರವನ್ನು ತಪ್ಪಿಸುವ ಪ್ರಯತ್ನದ ಯಾವುದೇ ಅಂಶಗಳನ್ನು ಒಳಗೊಂಡಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.