ಅಮ್ಮನಿಗೆ ತಗೋ ಬಾ ಅಂದ್ರೆ ತನಗೇ ಗಿಫ್ಟ್ ತಗೊಂಡು ಬಂದ ವಂಶಿಕಾ..!

Public TV
2 Min Read
vamshika 1

ಬೆಂಗಳೂರು: ಮಾಸ್ಟರ್ ಆನಂದ್ ಮಗಳು ವಂಶಿಕಾ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಸಖತ್ ಫೆಮಸ್ ಆಗಿದ್ದಾಳೆ. ಅಮ್ಮನಿಗಾಗಿ ಗಿಫ್ಟ್ ತೆಗೆದುಕೊಂಡು ಬರಲು ವಂಶಿಕಾಗೆ ಟಾಸ್ಕ್ ನೀಡಲಾಗಿತ್ತು. ಆದರೆ ವಂಶಿಕಾ ಮಾತ್ರ ಅವಳಿಗಾಗಿ ಶಾಪಿಂಗ್ ಮಾಡಿಕೊಂಡು ಬಂದಿರುವ ವೀಡಿಯೋವೊವನ್ನು ಖಾಸಗಿ ವಾಹಿನಿ ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರು ಫೀದಾ ಆಗಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಪ್ರತಿವಾರ ಹೊಸ ಹೊಸ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಈ ವಾರ ಅಮ್ಮನ ಸಹಾಯ ಇಲ್ಲದೆ ಅಮ್ಮನಿಗೋಸ್ಕರ ಮಕ್ಕಳು ಗಿಫ್ಟ್ ಕೊಡಬೇಕು. ಈ ಹಿನ್ನೆಲೆಯಲ್ಲಿ ವಂಶಿಕಾ ಕೂಡ ತನ್ನ ಅಮ್ಮನಿಗೆ ಗಿಫ್ಟ್ ತರೋಕೆ ಶಾಪಿಂಗ್‌ಗೆ ತೆರಳಿದ್ದಾಳೆ. ಈ ಪ್ರೋಮೋವನ್ನು ಒಂದೇ ದಿನದಲ್ಲಿ ಶಾಪಿಂಗ್ ಲೋಕದ ರಾಣಿಯಾದ ವಂಶಿಕಾ ಎನ್ನುವ ಕ್ಯಾಪ್ಶನ್‌ನೊಂದಿಗೆ ಈ ವೀಡಿಯೋ ಖಾಸಗಿ ವಾಹಿನಿ ಹಂಚಿಕೊAಡಿದೆ. ಸದ್ಯ, ಈ ವಿಡಿಯೋವನ್ನು ವೀಕ್ಷಕರು ಸಾಕಷ್ಟು ಇಷ್ಟಪಟ್ಟಿದ್ದಾರೆ. ವಂಶಿಕಾ ನಡೆದುಕೊಂಡ ರೀತಿಗೆ ಎಲ್ಲರೂ ಬಿದ್ದುಬಿದ್ದು ನಕ್ಕಿದ್ದಾರೆ.

ವೀಡಿಯೋದಲ್ಲಿ ಏನಿದೆ?: ಅಮ್ಮನಿಗೆ ಗಿಫ್ಟ್ ತೆಗೆದುಕೊಂಡು ಬರಲು ಹೋದ ವಂಶಿಕಾ ತನಗೆ ಗಿಫ್ಟ್ ತೆಗೆದುಕೊಂಡು ಬಂದಿದ್ದಾಳೆ. ಈ ಬಗ್ಗೆ ನಿರೂಪಕಿ ಅನುಪಮಾ ಮಾತನಾಡಿ, ಗಿಫ್ಟ್ ತೆಗೆದುಕೊಂಡು ಬನ್ನಿ ಅಂತ ಕಳಿಸಿದರೆ ವಂಶಿಕಾ ಒಂದು ಟೂರ್ ಮಾಡಿಕೊಂಡು ಬಂದಿದ್ದಾಳೆ. ನಮಗೆ ಇವಳ ಗಿಫ್ಟ್ ಮ್ಯಾಟರ್ ಆಗಲೇ ಇಲ್ಲ. ಅವಳು ಟೂರ್‌ಗೆ ಹೋಗಿರೋದು ಒಂದು ವಿಟಿ ಇದೆ ಎಂದರು. ಇದನ್ನೂ ಓದಿ: ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ: ಸಿಎಂ ಇಬ್ರಾಹಿಂ

ಆ ಬಳಿಕ ಅವಳ ಶಾಪಿಂಗ್ ವೀಡಿಯೋ ತೋರಿಸಲಾಯಿತು. ವಿಡಿಯೋ ಆರಂಭದಲ್ಲಿ ಮಾತನಾಡಿರುವ ವಂಶಿಕಾ, ಹಾಯ್, ಎವರಿಒನ್. ನಾನು ಇವತ್ತು ಶಾಪಿಂಗ್ ಮಾಡೋಕೆ ಬಂದಿದ್ದೇನೆ. ಅದು ನಂಗಲ್ಲ, ನಮ್ಮ ಅಮ್ಮನಿಗೆ. ಬನ್ನಿ ಏನೇನಿದೆ ನೋಡೋಣ ಎಂದು ಶಾಪಿಂಗ್ ಕಾಂಪ್ಲೆಕ್ಸ್ಗೆ ಎಂಟ್ರಿ ನೀಡುತ್ತಾಳೆ.

vamshika

ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ವಂಶಿಕಾ ಸಖತ್ ಸುತ್ತಾಟ ನಡೆಸಿದ್ದಾಳೆ. ಆದರೆ, ಎಲ್ಲಿಯೂ ಅವಳ ಅಮ್ಮನಿಗೆ ಗಿಫ್ಟ್ ಕೊಡುವ ಯಾವ ವಸ್ತುವೂ ಸಿಕ್ಕಿಲ್ಲ. ಈ ಕಾರಣಕ್ಕೆ ವಂಶಿಕಾ ತನಗಾಗಿ ಎಲ್ಲವನ್ನೂ ಕೊಂಡುಕೊಳ್ಳಲು ಪ್ರಾರಂಭಿಸಿದ್ದಾಳೆ. ಕೊನೆಯಲ್ಲಿ ವಂಶಿಕಾ ತನಗಾಗಿ ಖರೀದಿಸಿದ್ದೆ ಹೆಚ್ಚು. ಇದನ್ನೂ ಓದಿ: ಡಿವೋರ್ಸ್ ಹೆಚ್ಚಾಗಲು ಟ್ರಾಫಿಕ್ ಸಮಸ್ಯೆಯೂ ಕಾರಣವಾಗಿದೆ: ಅಮೃತಾ ಫಡ್ನವೀಸ್

ಈ ವೀಡಿಯೋ ನೋಡಿದ ಅನುಪಮಾ ವಂಶಿಕಾ ಅವರನ್ನು ಪ್ರಶ್ನಿಸಿದ್ದಾರೆ. ಕ್ಯಾಮರಾಮೆನ್‌ಗೆ, ವೀಡಿಯೋ ಎಡಿಟ್ ಮಾಡಿದವರಿಗೆ, ಅಲ್ಲಿದ್ದವರಿಗೆ ಎಲ್ಲರಿಗೂ ಡೌಟ್ ಬಂದಿದೆ. ನೀನು ಅಮ್ಮನಿಗೆ ಗಿಫ್ಟ್ ತರೋಕೆ ಹೋಗಿದ್ಯಾ ಅಥವಾ ನಿಂಗೆ ಗಿಫ್ಟ್ ತರೋಕೆ ಹೋಗಿದ್ಯಾ ಎಂದು ಪ್ರಶ್ನಿಸಿದ್ದಾರೆ. ನನಗೆ ಗಿಫ್ಟ್ ತರೋಕೆ ಹೋಗಿದ್ದೆ ಎಂದಳು ವಂಶಿಕಾ. ಇದನ್ನು ಕೇಳಿ ಸೃಜನ್ ಕೂಡ ನಕ್ಕರು. ಅಲ್ಲದೆ, ಅವರು ಪಂಚಿಂಗ್ ಡೈಲಾಗ್ ಕೂಡ ಹೊಡೆದರು.

Share This Article
Leave a Comment

Leave a Reply

Your email address will not be published. Required fields are marked *