ಬೆಂಗಳೂರು: ಚಿತ್ರರಂಗದ ಹಲವು ತಾರೆಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಕಹಿ ನೆನಪುಗಳನ್ನು ಮೀಟೂ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಕೆಲ ಮೀಟೂ ಆರೋಪಗಳು ನ್ಯಾಯಾಲಯದವರೆಗೂ ತಲುಪಿವೆ. ಮತ್ತೆ ಕೆಲ ಆರೋಪಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಅವರ ಮೇಲೆ ಮೀಟೂ ಆರೋಪ ಕೇಳಿ ಬಂದಿದೆ.
ಮಠಕ್ಕೆ ಆಸರೆ ಕೇಳಿಕೊಂಡ ಬಂದ ಮಹಿಳೆ ಜೊತೆ ಸ್ವಾಮೀಜಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬವುದು ಸಂತ್ರಸ್ತೆಯ ಆರೋಪ. ಈ ವಿಷಯವನ್ನು ಯಾರಿಗಾದ್ರೂ ಹೇಳಿದ್ರೆ ನಿನ್ನ ವಿರುದ್ಧ ಅಪಪ್ರಚಾರ ಹಾಗೂ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ರಂತೆ ಸ್ವಾಮೀಜಿ. ಈ ಸಂಬಂಧ ಸಂತ್ರಸ್ತೆ 7 ತಿಂಗಳ ಹಿಂದೆ ಸ್ವಾಮೀಜಿ ವಿರುದ್ಧ ಡಾಬಸ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿದ್ರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳದೇ ಬಿ ರಿಪೋರ್ಟ್ ಹಾಕಲು ಮುಂದಾಗಿದ್ದಾರೆ. ಪೊಲೀಸರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Advertisement
Advertisement
ವಿಡಿಯೋದಲ್ಲಿ ಏನಿದೆ?
ವನಕಲ್ಲು ಮಠ ನಮ್ಮ ಮನೆಯ ದೇವರು. ಹಾಗಾಗಿ ನಾನು ಹಲವು ನನ್ನ ಕುಟುಂಬಸ್ಥರೊಂದಿಗೆ ಮಠಕ್ಕೆ ಭೇಟಿ ನೀಡಿದ್ದೇನೆ. ಫೆಬ್ರವರಿ 24ರಂದು ಜಾತ್ರೆಗೆ ಹೋದಾಗ ಸ್ವಾಮೀಜಿ ಭೇಟಿ ಮತ್ತು ಪರಿಚಯ ಆಯ್ತು. ಈ ವೇಳೆ ಕೆಲಸ ಕೊಡಿಸುತ್ತೇನೆ ಅಂತಾ ಹೇಳಿ ನನ್ನ ಮೊಬೈಲ್ ನಂಬರ್ ಪಡೆದರು. ಒಂದು ದಿನ ಕೆಲಸದ ನಿಮಿತ್ತ ಅಂತಾ ಹೇಳಿ ನನ್ನ ಫೋಟೊ ಕಳುಹಿಸಿದೆ. ಅವರು ತಮ್ಮ ಫೋಟೋ ಕಳುಹಿಸಿದರು. ಸತತವಾಗಿ ಒಂದೂವರೆ ತಿಂಗಳು ನನ್ನ ಜೊತೆ ಸ್ವಾಮೀಜಿಗಳು ಮಾತನಾಡಿದ್ದಾರೆ.
Advertisement
ಕೆಲಸ ಕೊಡಿಸುತ್ತೇನೆ ಎಂಬ ಭರವಸೆ ನೀಡಿದ ಸ್ವಾಮೀಜಿ ಒಮ್ಮೆ ನಾನು ನಿನ್ನನ್ನು ಭೇಟಿ ಮಾಡಬೇಕೆಂದು ಹೇಳಿದರು. ನಿಮ್ಮನ್ನ ನೋಡದೆ ಕೆಲಸ ಕೊಡಿಸಲು ಸಾಧ್ಯವಿಲ್ಲ. ಹಾಗಾಗಿ ಒಂದು ಸಾರಿ ಬಂದು ಭೇಟಿ ಆಗಬೇಕು ಅಂತಾ ಫೋನ್ ನಲ್ಲಿ ತಿಳಿಸಿದರು. ಸ್ವಾಮೀಜಿಯನ್ನು ಭೇಟಿ ಮಾಡಲು ಮಠಕ್ಕೆ ತೆರಳಿದರೆ ಆರಂಭದಲ್ಲಿ ಒಂದು ವಾರ ನನಗೆ ಸಿಗಲಿಲ್ಲ. ಈ ವೇಳೆ ವಾಟ್ಸಪ್ ನಲ್ಲಿ ಮೆಸೇಜ್ ಮಾಡುತ್ತಿದ್ದರು. ಒಂದು ದಿನ ಸಂಜೆ 4 ಗಂಟೆಗೆ ಭೇಟಿ ಅಗ್ತೀನಿ ಅಂದರು. ಸಂಜೆ ಮಠಕ್ಕೆ ಹೋದಾಗ ಅರ್ಧ ಗಂಟೆಯಲ್ಲಿ ಸಿಗುತ್ತೇನೆ. ಸ್ವಲ್ಪ ತಡವಾದರೂ ಪರವಾಗಿಲ್ಲ, ಬೇರೆ ರೂಮ್ ಮಾಡಿಸಿಕೊಡುತ್ತೇನೆ ಅಲ್ಲೇ ಇರು ಅಂತಾ ಹೇಳಿದರು. ಅಂದು ಭೇಟಿಯಾದ ಸ್ವಾಮೀಜಿ ನನ್ನ ಬಗ್ಗೆ ಎಲ್ಲ ಮಾಹಿತಿಯನ್ನು ಕೇಳಿದರು. ಮುಂದೆ ನನಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿರು ಅಂತಾ ಹೇಳಿದರು.
Advertisement
ಕೆಲಸಕ್ಕೆ ಸಂಬಂಧಿಸಿದ ಮಾತು ಮುಗಿಯುತ್ತಿದ್ದಂತೆ ಅವರ ಬೆಡ್ ರೂಮ್ ನಲ್ಲಿ ಚಾರ್ಜ್ ಹಾಕಿರುವ ಮೊಬೈಲ್ ತೆಗೆದುಕೊಂಡು ಬಾ ಅಂತಾ ಅಲ್ಲಿ ಕಳುಹಿಸಿದರು. ನಾನು ಕೋಣೆ ಪ್ರವೇಶಿಸುತ್ತಿದ್ದಂತೆ ಹಿಂದಿನಿಂದ ಬಂದು ಬಾಗಿಲು ಹಾಕಿಕೊಂಡರು. ಅಲ್ಲದೇ ನನ್ನ ಸೀರೆ ಎಳೆದು ಅತ್ಯಾಚಾರಕ್ಕೆ ಯತ್ನಿಸಿದರು. ಈ ವೇಳೆ ನನಗೆ ಏನು ಮಾತಾಡೋದಕ್ಕೆ ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆ ವಿಡಿಯೋದಲ್ಲಿ ಹೇಳಿದ್ದಾರೆ.
ಸದ್ಯ ಈ ಪ್ರಕರಣವನ್ನು ಪಿಎಸ್‍ಐ ಶಂಕರ್ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸಂತ್ರಸ್ತೆ, ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿದ್ದೇನೆ ಎಂದು ಸಂತ್ರೆಸ್ತೆ ಹೇಳಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews