ಬೆಂಗಳೂರು: ಸ್ಯಾಂಡ್‍ಲ್‍ವುಡ್ ಮಹಿಳಾ ಅಭಿಮಾನಿಗಳಿಗೆ ಗುಡ್ ನ್ಯೂಸ್. ಬಹಳಷ್ಟು ಮಂದಿ ನಟಿಯರಿಗೆ ಅವರದ್ದೇ ಆದ ಮಹಿಳಾ ಅಭಿಮಾನಿಗಳಿದ್ದಾರೆ. ಈಗ ಈ ಮಹಿಳಾ ಅಭಿಮಾನಿಗಳಿಗಾಗಿ ನಟಿಯರು ತಮ್ಮ ಡ್ರೆಸ್ ಮಾರಾಟ ಮಾಡಲು ಮುಂದಾಗಿದ್ದಾರೆ.
ಹೌದು, ನಟಿಯರು ಅಂದ್ರೆ ಡ್ರೆಸ್ ಗಳಿಗೆ ಕೊರತೆ ಇರುವುದಿಲ್ಲ. ಮನೆಯ ವಾರ್ಡ್ ರೋಬ್ ಫುಲ್ ಡ್ರೆಸ್ ಗಳಿಂದ ತುಂಬಿರುತ್ತದೆ. ತೊಡುವ ಉಡುಗೆಗಳು ಮತ್ತೆ ರಿಪೀಟ್ ಆಗಬಾರದು ಎನ್ನುವ ಕಾರಣಕ್ಕೆ ಹೊಸ ಉಡುಪುಗಳನ್ನು ಖರೀದಿಸುತ್ತಿರುತ್ತಾರೆ. ಇದರಿಂದಾಗಿ ವಾರ್ಡ್ ರೋಬ್ ಗಳು ಡ್ರೆಸ್ ಗಳಿಂದ ತುಂಬಿ ತುಳುಕುತ್ತಿರುತ್ತದೆ. ಈ ಉಡುಪುಗಳು ಬಳಸದೇ ಇದ್ದರೆ ಹಾಳಾಗುತ್ತದೆ. ಹೀಗಾಗಿ ನಟಿ ಮಣಿಯರು ಎಲ್ಲ ಸೇರಿಕೊಂಡು ಈಗ ತಾವು ಧರಿಸಿದ ಉಡುಪುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
Advertisement
ಶೃತಿಹರಿಹರನ್ ಐಡಿಯಾ:
ನಟಿ ಶೃತಿ ಹರಿಹರನ್ ಅವರು ಒಮ್ಮೆ ವಾರ್ಡ್ ರೋಬ್ ತೆರೆದು ಬಟ್ಟೆಗಳ ರಾಶಿ ನೋಡಿದಾಗ ಈ ಡ್ರೆಸ್ ಗಳನ್ನು ಏನು ಮಾಡುವುದು ಎಂದು ಆಲೋಚಿಸಿದಾಗ ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಹುದಲ್ಲ ಎನ್ನುವ ಯೋಚನೆ ಹೊಳೆಯಿತಂತೆ. ಈ ಯೋಚನೆಯನ್ನು ಇತರೇ ನಟಿಯರ ಜೊತೆ ಹಂಚಿಕೊಂಡಾಗ ಅವರು ಸಾಥ್ ನೀಡಿದ್ದು, ಈಗ ಯೋಚನೆ ಕಾರ್ಯರೂಪಕ್ಕೆ ಬಂದಿದೆ.
Advertisement
ಎನ್‍ಜಿಒಗೆ ಹಣ:
ಶೃತಿಹರಿಹರನ್ ಯೋಚನೆಯಿಂದಾಗಿ ‘ದಿ ವ್ಯಾನಿಟಿ ಟ್ರಂಕ್ ಸೇಲ್’ ನ ರೂಪ ಪಡೆದಿದ್ದು, ನಟಿಯರು ತಮ್ಮಲ್ಲಿರುವ ಬಟ್ಟೆ ಹಾಗೂ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಎಲ್ಲ ವಸ್ತುಗಳಿಗೂ ಕಡಿಮೆ ಬೆಲೆಯನ್ನೇ ನಿಗದಿಪಡಿಸಿದ್ದು, ಮಾರಾಟದಿಂದ ಬರುವ ಹಣ ಸರ್ಕಾರೇತರ ಸಂಸ್ಥೆಯಾದ ಜೆ.ಪಿ. ಫೌಂಡೇಶನ್ ಮತ್ತು ಆದ್ಯಾ ಫೌಂಡೇಶನ್ ಹೋಗುತ್ತದೆ. ಸಂಗ್ರಹವಾದ ಹಣ ಅನಾಥ ಮಕ್ಕಳ ಕಲ್ಯಾಣ ನಿಧಿಗೆ ಬಳಕೆಯಾಗಲಿದೆ.
Advertisement
ಯಾರೆಲ್ಲ ಕೈಜೋಡಿಸಿದ್ದಾರೆ?
ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರ್ನಾಡು, ಸೋನು ಗೌಡ, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ಮೇಘನಾ ರಾಜ್, ಮೇಘನಾ ಗಾಂವ್ಕರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಶಾನ್ವಿ ಶ್ರೀವತ್ಸ,ಸಂಗೀತಾ ಭಟ್, ಪ್ರಜ್ಞಾ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.
Advertisement
ನೀವು ಏನು ಮಾಡಬೇಕು?
ಈ ಸೇಲ್ ನಲ್ಲಿ ನಿಮಗೆ ಬಟ್ಟೆ/ ವಸ್ತುಗಳು ಬೇಕು ಎಂದಿದ್ದರೆ ಮೊದಲು ನೀವು https://insider.in/the-vanity-trunk-sale-nov12-2017/event ಹೆಸರು ನೊಂದಾಯಿಸಿಕೊಳ್ಳಬೇಕು. ನವೆಂಬರ್ 12ರ ಭಾನುವಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ, ರೆಸಿಡೆನ್ಸಿ ರೋಡ್‍ನಲ್ಲಿರುವ ಬಿ ಹೈವ್ ವರ್ಕ್‍ಶಾಪ್‍ನಲ್ಲಿ ಈ ಸೇಲ್ ನಡೆಯುತ್ತದೆ.