ಮೊದಲ ಬಾರಿಗೆ ಬಣ್ಣ ಹಚ್ಚಿದ ವಿ.ಹರಿಕೃಷ್ಣ ಪತ್ನಿ ವಾಣಿ

Public TV
1 Min Read
VANI HARIKRISHNA

ಡೀ ವಿಶ್ವವೇ ಮೆಚ್ಚಿಕೊಂಡ ಕಾಂತಾರದಂತಹ ಸೂಪರ್ ಹಿಟ್ ಚಿತ್ರಗಳ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಸಿ.ಆರ್.ಬಾಬಿ ಅವರ ಜೊತೆಗೂಡಿ ನಿರ್ಮಿಸಿರುವ ಚಿತ್ರ (Just Married) ಜಸ್ಟ್ ಮ್ಯಾರೀಡ್.

ಈಗಾಗಲೇ ಹಲವು ವಿಶಷತೆಗಳಿಂದ ಎಲ್ಲರ ಗಮನ ಸೆಳೆದಿರುವ ಜಸ್ಟ್ ಮ್ಯಾರೀಡ್ ಚಿತ್ರವನ್ನು ಸಿ.ಆರ್ ಬಾಬಿಯವರೆ ನಿರ್ದೇಶಿಸಿದ್ದಾರೆ. ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ನಾಯಕ – ನಾಯಕಿಯಾಗಿ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಟಿಸಿರುವ ಪ್ರಮುಖ ಕಲಾವಿದರನ್ನು ಚಿತ್ರತಂಡ ಈಗ ಪರಿಚಯಿಸುತ್ತಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಬಂಪರ್ ಗಿಫ್ಟ್‌ – ʻಕಾಂತಾರ: ಚಾಪ್ಟರ್ 1ʼ ಹೊಸ ಪೋಸ್ಟರ್‌ ರಿಲೀಸ್‌

ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ವಾಣಿ ಹರಿಕೃಷ್ಣ (Vani Harikrishna) ಇದೇ ಮೊದಲ ಬಾರಿಗೆ ಚಲನಚಿತ್ರದಲ್ಲಿ ನಟಿಸಿದ್ದು, ಮಂಗಳ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದುಕೊಂಡಿರುವ ರವಿಶಂಕರ್ ಗೌಡ ʻಜಸ್ಟ್ ಮ್ಯಾರೀಡ್ʼ ಚಿತ್ರದಲ್ಲಿ ವಿನಯ ಪ್ರಕಾಶ ಎಂಬ ಪಾತ್ರ ನಿರ್ವಹಿಸಿದ್ದಾರೆ. ಇದನ್ನೂ ಓದಿ: ನಾನು ಬಾಸ್ಕೆಟ್‌ಬಾಲ್ ಪ್ಲೇಯರ್, ಸ್ಪೋರ್ಟ್ಸ್‌ಗೆ ಹೈಟ್ ಮ್ಯಾಟರ್ ಆಗಲ್ಲ: ರಮ್ಯಾ

Share This Article