ಹೈದರಾಬಾದ್: ವಂದೇ ಭಾರತ್ ರೈಲುಗಳ (Vande Bharat Express Train) ವಿನ್ಯಾಸ ವಿಮಾನಗಳ (Flight) ವಿನ್ಯಾಸಕ್ಕಿಂತಲೂ ಚೆನ್ನಾಗಿದೆ. ಇದು ಪ್ರಯಾಣಿಕರಿಗೆ ಅತ್ಯಂತ ಆರಾಮದಾಯಕ ಪ್ರಯಾಣದ ಅನುಭವವನ್ನು ನಿಡಬಲ್ಲದು ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ.
Advertisement
ಭಾನುವಾರ ಸಿಕಂದರಾಬಾದ್ ಹಾಗೂ ವಿಶಾಖಪಟ್ಟಣಂ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಚಾಲನೆ ನೀಡುರುವ ಹಿನ್ನೆಲೆ ಮಾತನಾಡಿರುವ ಅಶ್ವಿನಿ ವೈಷ್ಣವ್, ವಂದೇ ಭಾರತ್ ರೈಲುಗಳು ವಿಮಾನಗಳಿಗಿಂತಲೂ ಉತ್ತಮವಾದ ರಚನೆಯನ್ನು ಹೊಂದಿದೆ. ಭಾರತೀಯ ರೈಲ್ವೇ ಇದೀಗ ಅಂತಹ 8 ರೈಲುಗಳಿಗೆ ಚಾಲನೆ ನೀಡಿದೆ ಎಂದು ಹೇಳಿದರು.
Advertisement
Advertisement
ವಂದೇ ಭಾರತ್‌ನ 8ನೇ ರೈಲಿಗೆ ಹಸಿರು ನಿಶಾನೆ ತೋರುವ ವೇಳೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ಸಂಖ್ಯೆ 10ರಲ್ಲಿ ಖುದ್ದಾಗಿ ಹಾಜರಿದ್ದರು. ಮಕರ ಸಂಕ್ರಾಂತಿಯ ಪುಣ್ಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಎಲ್ಲಾ ಜನರಿಗೆ ವಂದೇ ಭಾರತ್ ರೈಲಿನ ಉಡುಗೊರೆ ನೀಡಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ವೈಷ್ಣವ್ ಹೇಳಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಕಿಂಗ್ ಕೊಹ್ಲಿಯಿಂದ ಸಚಿನ್ ದಾಖಲೆ ಉಡೀಸ್
Advertisement
ವಂದೇ ಭಾರತ್ ಅತ್ಯುತ್ತಮ ರೈಲಾಗಿದೆ. ಇದು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 0 ಯಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳಬಲ್ಲದು. ಆದರೆ ವಿಶ್ವದ ಇತರ ರೈಲುಗಳು ಈ ವೇಗವನ್ನು ಪಡೆಯಲು 54 ರಿಂದ 60 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ವಂದೇ ಭಾರತ್‌ನ ವಿನ್ಯಾಸ ವಿಮಾನಕ್ಕಿಂತಲೂ ಉತ್ತಮವಾಗಿವೆ. ಇದು ಅತ್ಯಂತ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಯೋಗದಲ್ಲಿ ಕರ್ನಾಟಕ ಗಿನ್ನಿಸ್ ದಾಖಲೆ – ಏಕಕಾಲಕ್ಕೆ 6 ಲಕ್ಷಕ್ಕೂ ಅಧಿಕ ಮಂದಿ ಯೋಗಾಭ್ಯಾಸ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k