ಕೋಲ್ಕತ್ತಾ: 4 ದಿನದ ಹಿಂದಷ್ಟೇ ಪ್ರಾರಂಭವಾದ ವಂದೇ ಭಾರತ ಎಕ್ಸ್‌ಪ್ರೆಸ್ (Vande Bharat Express) ರೈಲಿಗೆ ಕೆಲವು ದುಷ್ಕರ್ಮಿಗಳು ಕಲ್ಲು (Stone) ತೂರಾಟ ನಡೆಸಿದ ಘಟನೆ ಪಶ್ಚಿಮ ಬಂಗಾಳದ (West Bengal) ಮಾಲ್ಡಾದ ಕುಮಾರ್‌ಗಂಜ್ ನಿಲ್ದಾಣದ ಬಳಿ ನಡೆದಿದೆ.
ಶುಕ್ರವಾರವಷ್ಟೇ ಆನ್‍ಲೈನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೌರಾದಿಂದ ನ್ಯೂ ಜಲ್ಪೈಗುರಿ ಜಂಕ್ಷನ್‍ಗೆ ಹೋಗುವ ಭಾರತದ 7ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಚಾಲನೆ ನೀಡಿದ್ದರು. ಇದಾದ 4 ದಿನದ ನಂತರ ಈ ಘಟನೆ ನಡೆದಿದ್ದು, ಕಲ್ಲು ತೂರಾಟದ ಪರಿಣಾಮವಾಗಿ ರೈಲಿನ ಕಿಟಕಿಯ ಗಾಜುಗಳು ಪುಡಿ ಪುಡಿಯಾಗಿವೆ.
Advertisement
Advertisement
ದಕ್ಷಿಣ ಬಂಗಾಳದಿಂದ ಉತ್ತರ ಬಂಗಾಳಕ್ಕೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ರೈಲನ್ನು 2022ರ ಡಿಸೆಂಬರ್ 30ರಂದು ಹೌರಾದಿಂದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಔಪಚಾರಿಕವಾಗಿ ಪ್ರಾರಂಭಿಸಲಾಯಿತು. ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ವ್ಯಕ್ತಿಯ ಶವ ಪತ್ತೆ – 15 ದಿನದಲ್ಲಿ 3ನೇ ಘಟನೆ
Advertisement
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪೂರ್ವ ರೈಲ್ವೇಸ್, ಮಂಗಳವಾರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚಲಿಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಇದರ ಪರಿಣಾಮವಾಗಿ ಬಾಗಿಲಿನ ಗಾಜು ಬಿರುಕು ಬಿಟ್ಟಿತ್ತು. ಈ ವೇಳೆ ರೈಲಿನ ಬೆಂಗಾವಲು ಪಡೆ ಓರ್ವ ಎಎಸ್‍ಐ ಮತ್ತು 4 ಸಿಬ್ಬಂದಿ ಇದ್ದರು. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ತೊಂದರೆ ಆಗಲಿಲ್ಲ ಎಂದರು.
Advertisement
ಕತ್ತಲಲ್ಲಿ ಯಾರು ಕಲ್ಲು ಎಸೆದಿದ್ದಾರೆ. ಯಾವ ಉದ್ದೇಶಕ್ಕಾಗಿ ಕಲ್ಲು ಎಸೆದಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಡೀ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದರು. ಇದನ್ನೂ ಓದಿ: ಜ.31ಕ್ಕೆ ಸಂಸತ್ ಅಧಿವೇಶನ; ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ