ಗಾಂಧಿನಗರ: ಇತ್ತೀಚೆಗಷ್ಟೇ ಆರಂಭವಾಗಿದ್ದ ಗಾಂಧಿನಗರ-ಮುಂಬೈ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಅ.8 ರಂದು ಎಮ್ಮೆಗಳಿಗೆ (Buffalo) ಡಿಕ್ಕಿ ಹೊಡೆದಿತ್ತು. ಇದೀಗ ಅ.9 ರಂದು ಹಸುವಿಗೆ (Cow) ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ.
ಗುಜರಾತ್‍ನ ಆನಂದ್ ರೈಲ್ವೇ ನಿಲ್ದಾಣದ ಸಮೀಪ ಏಕಾಏಕಿ ಹಸುವಿಗೆ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಅ.8 ರಂದು ಗುಜರಾತ್‍ನ ವತ್ವಾ ರೈಲು ನಿಲ್ದಾಣದ ಬಳಿ ಟ್ರ್ಯಾಕ್‍ನಲ್ಲಿ ಎಮ್ಮೆಗಳಿಗೆ ರೈಲು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ 4 ಎಮ್ಮೆಗಳು ಸಾವನ್ನಪ್ಪಿದ್ದವು. ರೈಲಿನ ಮುಂಭಾಗ ಹೊಡೆದು ಹೋಗಿತ್ತು. ಇದನ್ನೂ ಓದಿ: ‘ಕಬ್ಬಿಣದ ಕಾಲುಗಳ ವ್ಯಕ್ತಿ’ ಭಾರತಕ್ಕೆ ಗರಬಡಿಸಿದ್ದಾನೆ: ಮೋದಿಯನ್ನು ವ್ಯಂಗ್ಯವಾಡಿದ ಕಾಂಗ್ರೆಸ್
ವಂದೇ ಭಾರತ್ ರೈಲಿಗೆ ಫೈಬರ್ ಬಲವರ್ಧಿತ ಪ್ಲಾಸ್ಟಿಕ್‍ನಿಂದ ಮಾಡಿದ ಬಂಪರ್ ಅಳವಡಿಕೆ ಮಾಡಿರುವುದರಿಂದ ಕಾರ್ಯನಿರ್ವಹಣೆಗೆ ಅದೇನು ಅನಿವಾರ್ಯವಲ್ಲ ಹಾಗಾಗಿ ರೈಲು ಕಾರ್ಯಚರಿಸುತ್ತದೆ. ಆ ಬಳಿಕ ಇದನ್ನು ಬದಲಾಯಿಸಬಹುದಾಗಿದೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ಜಖಂ – ಎಮ್ಮೆಗಳ ಮಾಲೀಕನ ವಿರುದ್ಧ FIR
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), ಜಾನುವಾರುಗಳೊಂದಿಗೆ ಇಂತಹ ಘರ್ಷಣೆಯನ್ನು ತಪ್ಪಿಸಲು ಕಷ್ಟ. ಹಾಗಾಗಿ ರೈಲು ವಿನ್ಯಾಸ ಮಾಡುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ರೈಲಿನ ಮುಂಭಾಗವನ್ನು ಸಂಪೂರ್ಣವಾಗಿ ಬದಲಾಯಿಸಬಹುದಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಜಾನುವಾರುಗಳಿಗೆ ಡಿಕ್ಕಿ – ಕಳೆದ ವಾರ ಆರಂಭವಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂಭಾಗ ಜಖಂ
ಸೆಪ್ಟೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗಾಂಧಿನಗರ ನಿಲ್ದಾಣದಲ್ಲಿ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಬಳಿಕ ಅವರು ಅದೇ ರೈಲಿನಲ್ಲಿ ಅಹಮದಾಬಾದ್‍ನ ಕಲುಪುರ್ ರೈಲು ನಿಲ್ದಾಣದ ವರೆಗೆ ಪ್ರಯಾಣಿಸಿದ್ದರು. ಈ ರೈಲು ಕೇವಲ ಗಂಟೆಗೆ 160 ಕಿ.ಮೀ ತಲುಪುವ ಸಾಮರ್ಥ್ಯ ಹೊಂದಿದೆ.