‘ಕಬ್ಬಿಣದ ಕಾಲುಗಳ ವ್ಯಕ್ತಿ’ ಭಾರತಕ್ಕೆ ಗರಬಡಿಸಿದ್ದಾನೆ: ಮೋದಿಯನ್ನು ವ್ಯಂಗ್ಯವಾಡಿದ ಕಾಂಗ್ರೆಸ್

Public TV
2 Min Read
Vande Bharat Express 4

ಬೆಂಗಳೂರು: ಕಾಂಗ್ರೆಸ್‍ನದ್ದು (Congress) ಜೋಡೋ ಯಾತ್ರೆ, ಬಿಜೆಪಿಯದ್ದು (BJP) – ಭಾರತ್ ತೋಡೋ ಜಾತ್ರೆ. ಉದ್ಘಾಟನೆ ಯಾದ ಒಂದೇ ವಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಮುಖ ಒಡೆದುಕೊಂಡಿದೆ. ‘ಕಬ್ಬಿಣದ ಕಾಲುಗಳ ವ್ಯಕ್ತಿ’ ಭಾರತಕ್ಕೆ ಗರಬಡಿಸಿದ್ದಾನೆ ಎಂದು ಸರಣಿ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

Narendra Modi 4

ಕರ್ನಾಟಕದಲ್ಲಿ, ದೇಶದಲ್ಲಿ ಮತ್ತೆ ಶಾಂತಿಯ ತೋಟ ನಿರ್ಮಿಸುವ ಉದ್ದೇಶದಿಂದಲೇ ಕರ್ನಾಟಕದಲ್ಲಿ 40% ಸರ್ಕಾರವಿದ್ದರೆ. ಉತ್ತರ ಪ್ರದೇಶದಲ್ಲಿ 60% ಸರ್ಕಾರವೇ? 2021ರ ಡಿಸೆಂಬರ್‌ನಲ್ಲಿ ಮೋದಿ ಉದ್ಘಾಟಿಸಿದ ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇಯಲ್ಲಿ 15 ಅಡಿ ಆಳದ ಗುಂಡಿ ಉಂಟಾಗಿದೆ! ಇಲ್ಲಿಂದ ಅಲ್ಲಿವರೆಗೂ ಬಿಜೆಪಿಯದ್ದು ಕಮಿಷನ್ ವ್ಯವಹಾರವೇ ಆಗಿದೆ! ಬಿಜೆಪಿಯ ಇಂತಹ ಭ್ರಷ್ಟಾಚಾರ ತೊಲಗಿಸಲು ಭಾರತ್‌ ಜೋಡೋ ಬೆಂಬಲಿಸಿ. ಇದನ್ನೂ ಓದಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಜಖಂ – ಎಮ್ಮೆಗಳ ಮಾಲೀಕನ ವಿರುದ್ಧ FIR

BASAVARJ BOMMAI

ರಾಷ್ಟ್ರಕವಿ ಕುವೆಂಪು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದರು. ಕರ್ನಾಟಕ ಶಾಂತಿಯ ತೋಟ ಆಗಿತ್ತು. ಆದರೆ ಬಿಜೆಪಿ ಆಡಳಿತದಲ್ಲಿ ಉಡುವ ಬಟ್ಟೆಯಿಂದ ಹಿಡಿದು ತಿನ್ನುವ ಅನ್ನದವರೆಗೆ ದ್ವೇಷ ಬಿತ್ತಲಾಗುತ್ತಿದೆ. ‘ಬಾಯಲ್ಲಿ ಭಗವದ್ಗೀತೆ, ತಿನ್ನೋದು ಬದನೆಕಾಯಿ’ ಎಂಬಂತಿದೆ ಬೊಮ್ಮಾಯಿ (Basavaraj Bommai) ಅವರ ಮಾತು! ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಜನಮನ್ನಣೆಯಿಂದ ರೂಪುಗೊಳ್ಳಬೇಕು ಆದರೆ ಬಿಜೆಪಿ ಸರ್ಕಾರ ಆಪರೇಷನ್ ಕಮಲದಿಂದ ರೂಪುಗೊಂಡಿದೆ! ಇದನ್ನೂ ಓದಿ: ಇತ್ತೀಚೆಗೆ ನಿರ್ಮಿಸಿದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯಲ್ಲಿ ಭಾರೀ ಗುಂಡಿ – ನಾಲ್ವರಿಗೆ ಗಾಯ

ನೀವು PayCM ಆಗಿರುವುದು ಶಾಸಕರಿಗೆ ಕೋಟಿ ಕೋಟಿ Pay ಮಾಡಿಯೇ ಅಲ್ಲವೇ? ಶಾಸಕರ ಖರೀದಿಸಿ ಸಂವಿಧಾನ ವಿರೋಧಿ ಸರ್ಕಾರ ರಚನೆ, ಸಿಡಿ ಬ್ಲಾಕ್ಮೇಲ್ ಮಾಡಿದವರಿಗೆ ಮಂತ್ರಿ ಪದವಿ, ಸಚಿವ ಸ್ಥಾನಗಳು 40 ರಿಂದ 50 ಕೋಟಿಗೆ ಸೇಲ್, ಸಿಎಂ ಹುದ್ದೆ 2,500 ಕೋಟಿಗೆ ಮಾರಾಟ, 40% ಕಮಿಷನ್ ಭ್ರಷ್ಟಾಚಾರ, ಸರ್ಕಾರಿ ಹುದ್ದೆಗಳ ಮಾರಾಟ, ತಮ್ಮ 40% ಕಮಿಷನ್ ಅನಾಚಾರಗಳೆಲ್ಲವನ್ನೂ ಒಪ್ಪಿದ PayCMಗೆ ಧನ್ಯವಾದಗಳು ಎಂದು ಟೀಕಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *