ಗಾಂಧಿನಗರ: ಇತ್ತೀಚೆಗಷ್ಟೇ ಆರಂಭವಾಗಿದ್ದ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿಗೆ (Train) ಗುರುವಾರ ಜಾನುವಾರುಗಳು (Cattle) ಡಿಕ್ಕಿ ಹೊಡೆದ ಪರಿಣಾಮ ಅದರ ಮುಂಭಾಗಕ್ಕೆ ಹಾನಿಯಾಗಿದೆ.
ಇಂದು ಬೆಳಗ್ಗೆ 11:15ರ ಸುಮಾರಿಗೆ ಗುಜರಾತ್‌ನ (Gujarat) ವತ್ವಾ ರೈಲು ನಿಲ್ದಾಣದ ಬಳಿ ಟ್ರ್ಯಾಕ್‌ನಲ್ಲಿ ಜಾನುವಾರುಗಳಿಗೆ ರೈಲು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 4 ಎಮ್ಮೆಗಳು ಸಾವನ್ನಪ್ಪಿವೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ವತ್ವಾ ಬಳಿಯ ಹಾದಿಯಲ್ಲಿ ಒಂದು ತಿರುವು ಇದ್ದ ಕಾರಣ ಟ್ರ್ಯಾಕ್‌ನಲ್ಲಿ ಜಾನುವಾರುಗಳು ಇದ್ದುದು ತಕ್ಷಣಕ್ಕೆ ಕಾಣಿಸಿರಲಿಲ್ಲ. ಘಟನೆಯ ವೇಳೆ ರೈಲು ಸುಮಾರು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಜಾನುವಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಫೈಬರ್‌ನಿಂದ ಮಾಡಲ್ಪಟ್ಟಿದ್ದ ರೈಲಿನ ಮುಂಭಾಗ ಹಾನಿಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇರಳ ದುರಂತಕ್ಕೆ ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ
Advertisement
ಘಟನೆಯಲ್ಲಿ ಯಾವುದೇ ಎಂಜಿನ್‌ನ ಭಾಗಕ್ಕೆ ಹಾನಿಯಾಗಿಲ್ಲ. ಜಾನುವಾರುಗಳ ಮೃತದೇಹಗಳನ್ನು ತೆರವುಗೊಳಿಸಿದ ಬಳಿಕ ರೈಲು ಸರಿಯಾದ ಸಮಯಕ್ಕೆ ಗಾಂಧೀನಗರಕ್ಕೆ ತಲುಪಿದೆ. ಜಾನುವಾರುಗಳನ್ನು ರೈಲ್ವೇ ಟ್ರ್ಯಾಕ್ ಬಳಿ ಬಿಡದಂತೆ ಗ್ರಾಮಸ್ಥರಿಗೆ ಸಲಹೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ರೈಲ್ವೇ ವಕ್ತಾರರು ತಿಳಿಸಿದ್ದಾರೆ.
Advertisement
ಸೆಪ್ಟೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರ ನಿಲ್ದಾಣದಲ್ಲಿ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಬಳಿಕ ಅವರು ಅದೇ ರೈಲಿನಲ್ಲಿ ಅಹಮದಾಬಾದ್‌ನ ಕಲುಪುರ್ ರೈಲು ನಿಲ್ದಾಣದ ವರೆಗೆ ಪ್ರಯಾಣಿಸಿದ್ದರು. ಇದನ್ನೂ ಓದಿ: ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಬೊಮ್ಮಾಯಿ