ವಾಷಿಂಗ್ಟನ್ ಡಿಸಿ: ಅಮೆರಿಕಾದ ಹಿಂದೂ ದೇಗುಲಕ್ಕೆ ನುಗ್ಗಿದ ಕೆಲ ದುಷ್ಕರ್ಮಿಗಳು ಪೀಠೋಪಕರಣಗಳನ್ನು ಧ್ವಂಸ ಮಾಡಿ ಬಳಿಕ ಮುಖ್ಯ ದ್ವಾರದ ಗೋಡೆಯ ಮೇಲೆ Jesus Is The Only Lord ಎಂದು ಬರೆದಿದ್ದಾರೆ.
ಅಮೆರಿಕಾದ ಲೂಯಿಸ್ವಿಲ್ ನಗರದ ಸ್ವಾಮಿ ನಾರಾಯಾಣ ದೇಗುಲದಲ್ಲಿ ಜನವರಿ 30ರಂದು ಈ ಘಟನೆ ನಡೆದಿದೆ. ದೇವಸ್ಥಾನ ಪ್ರವೇಶಿಸಿದ ದುಷ್ಕರ್ಮಿಗಳು ಕಿಟಕಿಯ ಗಾಜುಗಳನ್ನು ಒಡೆದು, ಮುಖ್ಯ ಅರ್ಚಕರು ಕುಳಿತುಕೊಳ್ಳುವ ಖುರ್ಚಿಯ ಹಾಸಿಗೆಯನ್ನು ಹರಿದು ಹಾಕಿದ್ದಾರೆ. ದೇಗುಲದಲ್ಲಿ ಹಾಕಲಾಗಿದ್ದ ದೇವರ ಭಾವಚಿತ್ರಗಳ ಮೇಲೆ ಪೇಂಟ್ ಹಾಕಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಲೂಯಿಸ್ವಿಲ್ ನಗರದ ಮೇಯರ್ ಗ್ರೆಗ್ ಫಿಶ್ಚರ್, ಕೆಲವು ದಿನಗಳಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಲೂಯಿಸ್ವಿಲ್ ಇಸ್ಲಾಂ ಧರ್ಮ ಕೇಂದ್ರದ ಮೇಲೆ ದುಷ್ಕರ್ಮಿಗಳು ಇದೇ ರೀತಿ ದಾಳಿ ನಡೆಸಿದ್ದರು. ಹೀಗಾಗಿ ನಗರದಲ್ಲಿರುವ ಸಿಖ್ ಸಮುದಾಯದ ಮಂದಿರಕ್ಕೂ ಭದ್ರತೆ ನೀಡಲಾಗಿದೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ದುಷ್ಕರ್ಮಿಗಳ ಬಗ್ಗೆ ಮಾಹಿತಿ ಇದ್ದವರು ನಮ್ಮನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv