ಬೆಂಗಳೂರಿನ ಚೆನ್ನಸಂದ್ರ ಅರಣ್ಯ ಪ್ರದೇಶದಲ್ಲಿ ವನಮಹೋತ್ಸವ

Public TV
1 Min Read
Vanamahotsava celebrated at channasandra forest in Kasturi Nagar Layout Bengaluru

ಬೆಂಗಳೂರು: ಕಸ್ತೂರಿ ನಗರ ಬಡಾವಣೆಯಲ್ಲಿರುವ (Kasturi Nagar Layout) ಚೆನ್ನಸಂದ್ರ ಕೆರೆ / ಅರಣ್ಯ ಪ್ರದೇಶದಲ್ಲಿ ಕಸ್ತೂರಿ ನಗರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ, ಸಮಸ್ತ ನಾಗರೀಕರ ಸಮ್ಮುಖದಲ್ಲಿ, ಸಸಿ ನೆಡುವ ಮತ್ತು ಸ್ವಚ್ಛತೆ  ಮಾಡುವ ಮೂಲಕ ಸಂಭ್ರಮದಿಂದ ವನಮಹೋತ್ಸವ ಕಾರ್ಯಕ್ರಮವನ್ನು (Van Mahotsav Program) ಆಚರಿಸಲಾಯಿತು.

ಸುಮಾರು ನೂರಕ್ಕೂ ಅಧಿಕ ಬೇರೆ ಬೇರೆ ತಳಿಯ ಸಸಿಗಳನ್ನು ನೆಡಲಾಯಿತು. ಅದರ ಜೊತೆಗೆ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ, ಅರಣ್ಯ ಪ್ರದೇಶದಲ್ಲಿದ್ದ ಪ್ಲಾಸ್ಟಿಕ್, ಬಾಟಲಿ ಮತ್ತು ಇತರ ಮಣ್ಣಿನಲ್ಲಿ ಕರಗದೇ ಇರುವಂತ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.  ಇದನ್ನೂ ಓದಿ: ಬಬಲೇಶ್ವರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟ

ಅರಣ್ಯ ಪ್ರದೇಶದ ಸುತ್ತಲಿನ ಬೇಲಿಯನ್ನು ಬಲಪಡಿಸಿ, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಾಮಫಲಕಗಳನ್ನು ಅಳವಡಿಸಲಾಯಿತು. ಸುಮಾರು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರೀಕರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.

Share This Article