ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ (Valmiki Scam) ನಡೆದಿರುವ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ (Nagendra) ಅವರ ಆದಾಯದ ಮೂಲ ಕೆದಕಲು ಜಾರಿ ನಿರ್ದೇಶನಾಲಯ (ED) ಮುಂದಾಗಿದೆ.
2023ರ ವಿಧಾನಸಭೆ ಚುನಾವಣೆ (Vidhan Sabha Election) ವೇಳೆ ನಾಗೇಂದ್ರ ಸಲ್ಲಿಕೆ ಮಾಡಿರುವ ಅಫಿಡವಿಟ್ ಹಾಗೂ ದಾಳಿ ವೇಳೆ ಸಿಕ್ಕಿದ ಆಸ್ತಿ ಪತ್ರಗಳನ್ನು ತಾಳೆ ಮಾಡಲು ಮಂದಾಗಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ನಾಗೇಂದ್ರ ಆಸ್ತಿ ಎಷ್ಟಿದೆ?
ಚುನಾವಣೆ ಸಮಯದಲ್ಲಿ ಒಟ್ಟು 17 ಕೋಟಿ 20 ಲಕ್ಷಕ್ಕೂ ಅಧಿಕ ಆಸ್ತಿಯನ್ನು ನಾಗೇಂದ್ರ ಘೋಷಿಸಿದ್ದರು. ವಾಹನ, ಚಿನ್ನಾಭರಣ ಸೇರಿ 12.35 ಕೋಟಿ ರೂ. ಚರಾಸ್ತಿ, 4.88 ಕೋಟಿ ರೂ. ಸ್ಥಿರಾಸ್ತಿಯನ್ನು ಘೋಷಿಸಿದ್ದರು. ಇದನ್ನೂ ಓದಿ: ಕೊರಗಜ್ಜನ ಕೋಲದಲ್ಲಿ ಕತ್ರಿನಾ ಕೈಫ್, ಕೆಎಲ್ ರಾಹುಲ್ ಭಾಗಿ
ಬ್ಯಾಂಕ್ ಖಾತೆ, ಇನ್ಶೂರೆನ್ಸ್, ಖಾಸಗಿ ಕಂಪನಿಯಲ್ಲಿ ಹೂಡಿಕೆ ಮಾಡಿರುವ ನಾಗೇಂದ್ರ ಸಿರಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿಯಲ್ಲಿ 4.25 ಎಕರೆ ಜಮೀನು, ಬಳ್ಳಾರಿ ನಗರದ ನೆಹರು ಕಾಲೋನಿಯಲ್ಲಿ ಫ್ಲ್ಯಾಟ್, ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಫ್ಲ್ಯಾಟ್, ಬಿಇಎಲ್ ರಸ್ತೆಯಲ್ಲಿ ಫ್ಲ್ಯಾಟ್ ಹೊಂದಿದ್ದಾರೆ.
ತನಿಖೆಯ ವೇಳೆ ಈಗಿನ ಆಸ್ತಿ ಮತ್ತು 2023ರ ಅಫಿಡವಿಟ್‌ನಲ್ಲಿರುವ ಆಸ್ತಿ ತಾಳೆ ಹಾಕಿದಾಗ ವ್ಯತ್ಯಾಸ ಕಂಡುಬಂದಲ್ಲಿ ನಾಗೇಂದ್ರಗೆ ಸಂಕಷ್ಟ ಎದುರಾಗಲಿದೆ.