ಬೆಂಗಳೂರು: ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ (Valmiki Scam) ಸಂಬಂಧ ಸಿಬಿಐ (CBI) ಮಾಜಿ ಸಚಿವ ಬಿ.ನಾಗೇಂದ್ರಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಸಿಬಿಐ ನೋಟಿಸ್ ಹಿನ್ನೆಲೆ ನಾಗೇಂದ್ರಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಸಿಬಿಐ ಈಗ ನಾಗೇಂದ್ರ ವಿಚಾರಣೆಗೆ ಮುಂದಾಗಿರುವುದು ಹಗರಣದ ಆಳ-ಅಗಲವನ್ನು ಮತ್ತಷ್ಟು ಕೆದಕುವ ಮುನ್ಸೂಚನೆ ನೀಡಿದೆ. ಇದನ್ನೂ ಓದಿ:ವಾಲ್ಮೀಕಿ ಹಗರಣ – ನಾಗೇಂದ್ರಗೆ ಸೇರಿದ 8.07 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು
ವಾಲ್ಮೀಕಿ ಹಗರಣ ಹೊರ ಬಂದ ಬಳಿಕ ಸಚಿವ ಸ್ಥಾನಕ್ಕೆ ಮಾಜಿ ನಾಗೇಂದ್ರ ರಾಜೀನಾಮೆ ನೀಡಿದ್ದರು. ಬಳಿಕ ಇಡಿಯಿಂದ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ್ದ ಬಿ.ನಾಗೇಂದ್ರ, ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದರು. ಸಂಪುಟ ಪುನಾರಚನೆ ವೇಳೆ ತನಗೂ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ನಾಗೇಂದ್ರ ಲೆಕ್ಕಾಚಾರ ಇದೀಗ ಸಿಬಿಐ ನೋಟಿಸ್ ಬುಡಮೇಲು ಮಾಡಿದೆ.
ಬಂಧನದ ಭೀತಿಯಿಂದ ನಾಗೇಂದ್ರ ರಾಜಕೀಯ ಭವಿಷ್ಯಕ್ಕೆ ಕಂಟಕ ಎದುರಾಗಿದೆ. ಇದೀಗ ನಾಗೇಂದ್ರ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.ಇದನ್ನೂ ಓದಿ:ವಾಲ್ಮೀಕಿ ಹಗರಣ| ಬಳ್ಳಾರಿ ಬಿಜೆಪಿ ನಾಯಕನ ಮನೆ ಮೇಲೆ ಸಿಬಿಐ ದಾಳಿ

