ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (Karnataka Maharshi Valmiki Scheduled Tribe Development Corporation Ltd) ಹಗರಣ ಮಾಡಿದ ಆರೋಪಿಗಳು ಗಂಗಾ ಕಲ್ಯಾಣ ಯೋಜನೆಗೂ (Ganga Kalyana Scheme) ಕನ್ನ ಹಾಕಿದ ವಿಚಾರ ಈಗ ತನಿಖೆಯಿಂದ ಬೆಳಕಿಗೆ ಬಂದಿದೆ.
ಎಸ್‌ಸಿ (SC) ಮತ್ತು ಎಸ್‌ಟಿ (ST) ಸಮುದಾಯದ ಜಮೀನುಗಳಿಗೆ ಕೊಳವೆ ಬಾವಿ (Borewell) ತೆಗೆಯುವುದಕ್ಕೆ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ವಿರುದ್ಧ ಆಗಸ್ಟ್‌ನಲ್ಲೇ ಚಾರ್ಜ್‌ಶೀಟ್ ಸಲ್ಲಿಕೆ ಸಾಧ್ಯತೆ – ಯಾವೆಲ್ಲ ವರದಿ ಬರಬೇಕಿದೆ?
Advertisement
Advertisement
Advertisement
ಸರ್ಕಾರ ನಿರ್ದೇಶನ ಮತ್ತು ನಿಯಮದಂತೆ 43,333 ಕೋಟಿ ರೂ. ಹಣವನ್ನು ಗಂಗಾ ಕಲ್ಯಾಣ ಯೋಜನೆಗಾಗಿ ಮೀಸಲಾಗಿಡಲಾಗಿತ್ತು. ಆದರೆ ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ ಅಣತಿಯ ಮೇರೆಗೆ ಖಜಾನೆ ಅಧಿಕಾರಿಗಳು 43 ಕೋಟಿ ರೂ. ಹಣವನ್ನು ಕೂಡ ಯೂನಿಯನ್ ಬ್ಯಾಂಕ್ ಗೆ ವರ್ಗಾವಣೆ ಮಾಡಿದ್ದಾರೆ.
Advertisement
ಈ ಹಣವನ್ನು ವರ್ಗಾವಣೆ ಮಾಡುವಾಗ ಕೆಲವು ದಾಖಲಾತಿಗಳನ್ನು ನಕಲು ಮಾಡಿರುವುದು ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳು ಕೂಡ ಈ ಅಕ್ರಮದಲ್ಲಿ ಭಾಗಿ ಆಗಿರುವುದು ಈಗ ತನಿಖೆಯಲ್ಲಿ ಬಹಿರಂಗವಾಗಿದೆ.