ದಾವಣಗೆರೆ: ವಾಲ್ಮೀಕಿ ನಾಯಕ ಸಮಾಜದ (Valmiki Community) ಬಗ್ಗೆ ಮಾಜಿ ಸಂಸದ ರಮೇಶ್ ಕತ್ತಿ (Ramesh Katti) ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಮೇಶ್ ಕತ್ತಿಯವರು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ವೇಳೆ ನಾಯಕ ಸಮಾಜದವರ ಬಗ್ಗೆ ಕೀಳು ಪದ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಅವರ ವಿರುದ್ಧ ಜಾತಿನಿಂದನೆ (Atrocity case) ಆರೋಪ ಮಾಡಲಾಗಿದೆ. ಈ ಸಂಬಂಧ ವಾಲ್ಮೀಕಿ ಸಮಾಜದ ಮುಖಂಡರು ದಾವಣಗೆರೆಯ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಜಾರಕಿಹೊಳಿ ಸಹೋದರರ ಪಾಲಾದ ಡಿಸಿಸಿ ಬ್ಯಾಂಕ್ ಗದ್ದುಗೆ – ತೊಡೆ ತಟ್ಟಿದ್ದ ಸವದಿ, ಕತ್ತಿಗೆ ಮುಖಭಂಗ
ರಮೇಶ್ ಕತ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ದಾವಣಗೆರೆ (Davanagere) ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಹೈಡ್ರಾಮಾ; ಜಾರಕಿಹೊಳಿ v/s ಸವದಿ-ಕತ್ತಿ ಬಣ ಜಟಾಪಟಿ

