ದಾವಣಗೆರೆ: ವಾಲ್ಮೀಕಿ ಹೇಳಿದ ರಾಮನೇ ಬೇರೆ, ಅಯೋಧ್ಯೆಯಲ್ಲಿರುವ (Ayodhya) ರಾಮನೇ ಬೇರೆ ಎಂದು ಸಚಿವ ಹೆಚ್.ಸಿ ಮಹಾದೇವಪ್ಪ (H.C. Mahadevappa) ಹೇಳಿದ್ದಾರೆ.
ದಾವಣಗೆರೆಯ (Davanagere) ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದ ಜಾತ್ರೆಯ ವೇದಿಕೆ ಮೇಲೆ ಅವರು ಮಾತನಾಡಿದರು. ಈ ವೇಳೆ, ವಾಲ್ಮೀಕಿಯಿಂದ ರಾಮನೋ ಅಥವಾ ರಾಮನಿಂದ ವಾಲ್ಮೀಕಿಯೋ ಎನ್ನುವ ಚಿಂತನೆ ಆಗಬೇಕು. ವಾಲ್ಮೀಕಿ ಹೇಳಿದ ರಾಮನೇ ಬೇರೆ. ಈ ಅಯೋಧ್ಯೆಯ ರಾಮನೇ ಬೇರೆ ಎಂದಿದ್ದಾರೆ.
ವಿಶ್ವ ಬ್ಯಾಂಕ್ ರಾಜ್ಯದ ಗ್ಯಾರಂಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಗ್ಯಾರೆಂಟಿ ಯೋಜನೆಗಳಿಂದ ಜನರ ಬದುಕು ಬದಲಾಗುತ್ತಿದೆ ಎಂದಿದ್ದಾರೆ.
ರಾಜ್ಯದಲ್ಲಿ ಬಾಕಿ ಇರುವ ಬ್ಯಾಕ್‍ಲಾಗ್ ಹುದ್ದೆಗಳನ್ನ ಭರ್ತಿ ಮಾಡುತ್ತೇವೆ. ಎಸ್‍ಸಿ, ಎಸ್‍ಟಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳುತ್ತಿದೆ. 24% ರಷ್ಟು ಎಸ್‍ಸಿ, ಎಸ್‍ಟಿ ಒಂದಾಗಬೇಕು ಎಂದು ವಾಲ್ಮೀಕಿ ಸ್ವಾಮೀಜಿ ಹೇಳಿದ್ದಾರೆ. ಅವರು ಒಂದಾದ್ರೆ ರಾಜಕೀಯದ ಅಧಿಕಾರ ಹಿಡಿಯಬಹುದು ಎಂದಿದ್ದಾರೆ.