ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಬಯಲಾದ ಆಡಿಯೋ, ವೀಡಿಯೋ ಸಾಕ್ಷ್ಯಗಳು ಹಗರಣದ ಕರ್ಮಕಾಂಡವನ್ನು ಬಟಾಬಯಲು ಮಾಡಿವೆ.
ಅಧೀಕ್ಷಕ ಚಂದ್ರಶೇಖರ್ (Chandrashekar) ಆತ್ಮಹತ್ಯೆಗೆ (Suicide) 3 ದಿನ ಮೊದಲು ಅಂದ್ರೆ ಮೇ 24ರಂದು ನಿಗಮದ ಎಂಡಿ ಪದ್ಮನಾಭ್ (MD Padmanabhan) ಮತ್ತು ಲೆಕ್ಕಪರಿಶೋಧಕ ಪರಶುರಾಮ್ (Parashuram) ಹೋಟೆಲ್ ಒಂದರಲ್ಲಿ ರಹಸ್ಯ ಸಭೆ ನಡೆಸಿದ್ದರು. ಹಗರಣದಲ್ಲಿ ಯಾರ‍್ಯಾರು ಪಾಲುದಾರರು? ಹಗರಣ ಬಯಲಾದ್ರೆ ಏನಾಗುತ್ತೆ? ಸಿಬಿಐ ತನಿಖೆ ನಡೆದರೆ ಏನಾಗುತ್ತದೆ? ಸ್ಥಳೀಯವಾಗಿಯೇ ತನಿಖೆ ನಡೆಸಿದರೆ ಏನಾಗುತ್ತೆ? ಎಂಬ ಬಗ್ಗೆ ಪದ್ಮನಾಭ್-ಪರಶುರಾಮ್ ಮಾತಾಡಿಕೊಂಡಿದ್ದರು.
Advertisement
ಎಂಡಿ ತಮ್ಮನ್ನು ಹಗರಣದಲ್ಲಿ ಸಿಲುಕಿಸಬಹುದು ಎಂಬ ಭಯಕ್ಕೆ ಇದೆಲ್ಲವನ್ನು ಅಧೀಕ್ಷಕ ಪರಶುರಾಮ್ ರೆಕಾರ್ಡ್ ಮಾಡಿಕೊಂಡಿದ್ದರು. ಇದೀಗ ಇದೇ ಆಡಿಯೋ-ವೀಡಿಯೋ ಔಟ್ ಆಗಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಹಿಂದೆ ತುಷ್ಟೀಕರಣ ಅಜೆಂಡಾ: ನಿಖಿಲ್ ಕುಮಾರಸ್ವಾಮಿ
Advertisement
Advertisement
ಆಡಿಯೋ ಸಾಕ್ಷ್ಯ 1 – ಸಚಿವ ನಾಗೇಂದ್ರಗೆ ಗೊತ್ತು!
ಪರಶುರಾಮ್, ಲೆಕ್ಕ ಪರಿಶೋಧಕ: ಮಿನಿಸ್ಟರ್ ಗಮನಕ್ಕೆ ಇಲ್ವಾ ಸರ್ ಇದು. ನೆಕ್ಕಂಟಿ ನಾಗರಾಜ್ ಅಕೌಂಟ್ ಓಪನ್ ಮಾಡಿರೋದು.
ಪದ್ಮನಾಭ, ಎಂಡಿ: ಅದು ಗೊತ್ತು ಅವರಿಗೆ, ಅವರೇ ಅಲ್ವಾ, ಎಲ್ಲರನ್ನು ಕರೆಸಿ, ಮಾತನಾಡಿದ್ದು.
ಪರಶುರಾಮ್, ಲೆಕ್ಕ ಪರಿಶೋಧಕ: ಅಕೌಂಟ್ ಓಪನ್ ಮಾಡೋವಾಗ ಇದ್ದರಲ್ಲ.
Advertisement
ಆಡಿಯೋ ಸಾಕ್ಷ್ಯ 2 – ಅಧ್ಯಕ್ಷರಿಗೆ ಹೇಳ್ಬೇಡಿ ರಾದ್ದಾಂತ ಆಗುತ್ತೆ!
ಪರಶುರಾಮ್, ಲೆಕ್ಕ ಪರಿಶೋಧಕ : ಬ್ಯಾಂಕ್‌ನವರು ಈಗ ಕೇಸ್ ಮಾಡ್ತಿವಲ್ಲ ನಮ್ಮ ದುಡ್ಡು ನಮಗೆ ಕೊಡ್ತಾರಾ ಅವರು ಅಂತಾ? ಅಧ್ಯಕ್ಷರಿಗೆ ಹೇಳೋದಾ ಬೇಡ್ವಾ ಅಂತಾ.
ಪದ್ಮನಾಭ, ಎಂಡಿ : ಹೇಳಿದ್ರೆ ದೊಡ್ಡ ರಾದ್ದಾಂತ ಮಾಡ್ತಾರೆ ಈಗ. ಸೋಮವಾರ, ಮಂಗಳವಾರ, ಬುಧವಾರ ಮೂರು ದಿನ ಬಿಡೋಣ ಈಗ. ಮ್ಯಾನೇಜ್ ಮಾಡಿ ಕಳಿಸಿ. ಅವನಿಗೂ ಅಷ್ಟೇ, ಆಯ್ತಪ್ಪ ಎಲ್ಲಾ ಪ್ರಿಂಟ್ ತೆಗೆಯಕ್ಕೆ ಹೇಳಿದ್ದೀನಿ ಕೊಡ್ತಿನಿ ಅಂತಾ ಹೇಳಿ ಕಳಿಸಿ. ಇದನ್ನೂ ಓದಿ: ಮುಡಾ ಭ್ರಷ್ಟಾಚಾರ ಪ್ರಕರಣ – ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು
ಆಡಿಯೋ ಸಾಕ್ಷ್ಯ 3 ಹಗರಣ ಬಯಲಾದ್ರೆ ಏನ್ ಹೇಳ್ಬೇಕು?
ಪರಶುರಾಮ್, ಲೆಕ್ಕ ಪರಿಶೋಧಕ : ನಿಮ್ಮ ಕಾಂಟ್ಯಾಕ್ಟ್‌ನಲ್ಲಿ ಯಾರು ಇದ್ದಾರೆ ಸಾರ್?
ಪದ್ಮನಾಭ, ಎಂಡಿ : ಅದೇ ನಾಗರಾಜ್ ಬಾಮೈದ
ಪರಶುರಾಮ್, ಲೆಕ್ಕ ಪರಿಶೋಧಕ : ನಾನು ಅವತ್ತೇ ಹೇಳಿದ್ದೆ ಸಾರ್, ಬೇಡ ಬೇಡ ಅಂತಾ. ಈ ಸೂ… ಮಕ್ಕಳು ಬಂದ್ರಲ್ಲ.
ಪದ್ಮನಾಭ, ಎಂಡಿ: ನಾವು ಅದನ್ನು ಹೇಳಬಾರದು. ಒಂದೇ ಮಾತಲ್ಲಿ ಹೇಳಬೇಕು. ಮಿನಿಸ್ಟರ್ ಆಫೀಸ್‌ನಿಂದ ಹೇಳಿದ್ರು. ನಾಗರಾಜ್ ಕಡೆಯಿಂದ ಒತ್ತಡ ಬಂತು. ನಾವು ಆಯಿತು ಅಂತಾ, ಇದ್ದ ಅಕೌಂಟ್ ಟ್ರಾನ್ಸ್‌ಫರ್ ಮಾಡಿಕೊಟ್ವಿ.