ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Corporation) 187 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ರಾಯಚೂರಿನಲ್ಲಿ (Raichuru) ಸತತ 40 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಇ.ಡಿ (Enforcement Directorate) ಅಧಿಕಾರಿಗಳು ವಿಚಾರಣೆಯನ್ನು ನಿನ್ನೆ ರಾತ್ರಿ 10:30 ರ ಸುಮಾರಿಗೆ ಮುಕ್ತಾಯಗೊಳಿಸಿದ್ದಾರೆ.
Advertisement
ರಾಯಚೂರಿನ ದದ್ದಲ್ ನಿವಾಸದಲ್ಲಿ ಇಡಿ ಅಧಿಕಾರಿಗಳ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ದದ್ದಲ್ ಅವರ ಮಾಜಿ ಪಿಎ ಪಂಪಣ್ಣ, ಅಳಿಯ ಚನ್ನಬಸವ, ಪತ್ನಿ, ಸಹೋದರಿಯನ್ನು ವಿಚಾರಣೆಗೆ ಒಳಪಡಿಸಿದ್ದ ಅಧಿಕಾರಿಗಳು ಸಾಕಷ್ಟು ಮಹತ್ವದ ದಾಖಲೆಗಳನ್ನ ಕಲೆ ಹಾಕಿದ್ದಾರೆ. ರಾಯಚೂರಿನಲ್ಲಿನ ತಪಾಸಣೆ ಹಾಗೂ ವಿಚಾರಣೆ ಮುಗಿದಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್ – ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ
Advertisement
Advertisement
ವಿಚಾರಣೆ ಮುಗಿದ ಬಳಿಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ರಾಠೋಡ್‌ರನ್ನ ದದ್ದಲ್ ಮನೆಯಲ್ಲಿಯೇ ಅಧಿಕಾರಿಗಳು ಬಿಟ್ಟು ಹೋಗಿದ್ದಾರೆ. ಇಡಿ ಅಧಿಕಾರಿಗಳು ಹೋದ ಬಳಿಕ ಪಂಪಣ್ಣ ತನ್ನ ಅಪಾರ್ಟ್‌ಮೆಂಟ್‌ಗೆ ಏಕಾಂಗಿಯಾಗಿ ಬಂದಿದ್ದಾರೆ.
Advertisement
ಈ ವೇಳೆ ಮಾತನಾಡಿದ ಪಂಪಣ್ಣ ರಾಠೋಡ್, ಪ್ರಕರಣ ತನಿಖೆ ಹಂತದಲ್ಲಿದೆ. ಸಾರ್ವಜನಿಕವಾಗಿ ಮಾತನಾಡಬಾರದು ಅಂತಾ ಹೇಳಿದ್ದಾರೆ. ಕರೆದಾಗ ಬರಲು ಇ.ಡಿ ಅಧಿಕಾರಿಗಳು ಸೂಚನೆ ನೀಡಿ ಹೋಗಿದ್ದಾರೆ ಎಂದು ಹೇಳಿದರು. ಎರಡು ದಿನಗಳಿಂದ ಇಡಿ ಅಧಿಕಾರಿಗಳು ನನ್ನ ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಇದ್ದ ಆಫೀಸರ್ ಒಬ್ಬರು ನನ್ನ ಹೆಸರು ಹೇಳಿದ್ದಾರೆ. ಅವರು ಯಾಕೆ ನನ್ನ ಹೆಸರು ಹೇಳಿದ್ದಾರೆ ಅನ್ನೋದೆ ನನಗೆ ಅಚ್ಚರಿ ಎನಿಸಿದೆ. ನಿಗಮದ ಅಧಿಕಾರಿಗಳು ನನಗೆ ಪರಿಚಯ ಇದ್ದಾರೆ. ಇಲ್ಲಾ ಅಂತ ಹೇಳಲ್ಲ. ಆದರೆ ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನನಗೇನೂ ಗೊತ್ತಿಲ್ಲ: ಇ.ಡಿ ವಶಕ್ಕೆ ಪಡೆದಾಗ ಶಾಸಕ ನಾಗೇಂದ್ರ ಪ್ರತಿಕ್ರಿಯೆ
ಎಸ್‌ಐಟಿ ತನಿಖೆ ವಿಚಾರಣೆಗೂ ಹೋಗಿ ಬಂದಿದ್ದೇನೆ. ಇಡಿ ಅಧಿಕಾರಿಗಳು ಸಡನ್ ಆಗಿ ಬಂದರು. ನನ್ನ ಮನೆಯಲ್ಲಿ ಪಿನ್ ಟೂ ಪಿನ್ ಚೆಕ್ ಮಾಡಿದರು. ನನ್ನ ಬಳಿ ಇದ್ದ ಕೆಲ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ನಾನು ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ. ಆಸ್ತಿಗೆ ಸಂಬಂಧಪಟ್ಟ ದಾಖಲೆಗಳ ಮಾಹಿತಿ ಪಡೆದಿದ್ದಾರೆ. ನಾನು ಸರ್ಕಾರಿ ನೌಕರ. ನನ್ನ ಬ್ಯಾಂಕ್ ವಹಿವಾಟುಗಳು ಹೆಚ್ಚಾಗಿ ಇಲ್ಲ. ತನಿಖೆಗೆ ಸಹಕಾರ ನೀಡುವೆ ಎಂದು ತಿಳಿಸಿದ್ದಾರೆ.