– ಯಾವ್ಯಾವ ಖಾತೆಗೆ ಎಷ್ಟು ಹಣ – ಇಲ್ಲಿದೆ ವಿವರ..
– ನಿಗಮದ ಹಣ ತೆಲಂಗಾಣ ಚುನಾವಣೆಗೆ? – ಬಿಜೆಪಿ ಆರೋಪ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ (Valmiki Development Corporation) ಹಗರಣ ಬಗೆದಷ್ಟು ಬಯಲಾಗುತ್ತಿದೆ. ನಿಗಮದ ಮುಖ್ಯ ಖಾತೆಯಿಂದ ತೆಗೆದ ಬಹುಕೋಟಿ ಹಣ ಎಲ್ಲೆಲ್ಲಿಗೆ ವರ್ಗಾವಣೆಯಾಯಿತು? ಯಾವ ಕಂಪನಿಗಳಿಗೆ ಎಷ್ಟು ಹಣ ಹೋಗಿದೆ ಎಂಬ ಬಗ್ಗೆ ‘ಪಬ್ಲಿಕ್ ಟಿವಿ’ ಎಕ್ಸ್‌ಕ್ಲೂಸಿವ್ ವರದಿ ಇಲ್ಲಿದೆ.
Advertisement
89.62 ಕೋಟಿ ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. 8 ಕ್ಕೂ ಹೆಚ್ಚು ವೈಯಕ್ತಿಕ ಖಾತೆಗಳಿಗೂ ಹಣ ವರ್ಗಾವಣೆ ಆಗಿದೆ. ಬರೋಬ್ಬರಿ 40.10 ಕೋಟಿ ವೈಯಕ್ತಿಕ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಕೆಲ ಸಾಫ್ಟವೇರ್ ಕಂಪನಿಗಳ ಖಾತೆಗಳಿಗೂ ಹಣ ಹೋಗಿದೆ. ಅವುಗಳ ಪೈಕಿ ಬೆಂಗಳೂರಿನ ಕಂಪನಿಗಳೇ ಅಧಿಕ ಎಂಬ ಮಾಹಿತಿ ಹೊರಬಿದ್ದಿದೆ. ಅಷ್ಟೇ ಅಲ್ಲ ಆರ್‌ಬಿಎಲ್‌ನ ಶಾಖೆಯಲ್ಲೂ ಖಾತೆ ಇದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್ – ಸಚಿವ ನಾಗೇಂದ್ರ ತಲೆದಂಡಕ್ಕೆ ವಿಜಯೇಂದ್ರ ಆಗ್ರಹ!
Advertisement
Advertisement
ವಾಲ್ಮೀಕಿ ನಿಗಮದ ಹಣ ಹೋಗಿದ್ದು ಎಲ್ಲಿಗೆ?
ಮಾರ್ಚ್ 5
ಪಿಫ್‌ಮಸ್ ಮ್ಯಾನೇಜ್‌ಮೆಂಟ್ ಪ್ರೈ.ಲಿ- 5.35 ಕೋಟಿ ವರ್ಗಾವಣೆ
ಝಲಿಯಂಟ್ ಟ್ರೈನಿಂಗ್ ಆ್ಯಂಡ್ ಕನ್ಸಲ್ಟಿಂಗ್ ಸರ್ವೀಸ್- 4.97 ಕೋಟಿ ವರ್ಗಾವಣೆ
Advertisement
ಮಾರ್ಚ್ 6
ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿ- 4.53 ಕೋಟಿ
ವೈಎಂ ಎಂಟರ್‌ಪ್ರೈಸಸ್- 4.98 ಕೋಟಿ
ಮನ್ಹು ಎಂಟರ್‌ಪ್ರೈಸಸ್- 25.01 ಕೋಟಿ
ಅಕಾರ್ಡ್ ಬ್ಯುಸಿನೆಸ್ ಸರ್ವೀಸಸ್- 5.46 ಕೋಟಿ
ಮೆ.ಟ್ಯಾಲೆಂಕ್ ಸಾಫ್ಟ್‌ವೇರ್ ಇಂಡಿಯಾ ಪ್ರೈ.ಲಿ- 5.10 ಕೋಟಿ
ಮಾರ್ಚ್ 11
ನಿತ್ಯ ಸೆಕ್ಯುರಿಟಿ ಸರ್ವೀಸಸ್- 4.47 ಕೋಟಿ
ವೋಲ್ಟಾ ಟೆಕ್ನಾಲಜಿ ಸರ್ವೀಸಸ್- 5.12 ಕೋಟಿ
ಮಾರ್ಚ್ 23
ವಿ6 ಬ್ಯುಸಿನೆಸ್ ಸಲ್ಯೂಷನ್ಸ್- 4.50 ಕೋಟಿ
ಮಾರ್ಚ್ 30
ಎಂಟು ವೈಯಕ್ತಿಕ ಖಾತೆಗಳಿಗೆ- 40.10 ಕೋಟಿ
ನಿಗಮದ ಹಣ ತೆಲಂಗಾಣ ಚುನಾವಣೆಗಾ?
ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಗೂ ಹೋಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ. ಆರೋಪದ ಬೆನ್ನಲ್ಲೇ 8 ವೈಯಕ್ತಿಕ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಮಾಹಿತಿ ಬಹಿರಂಗವಾಗಿದೆ. ನಿಗಮದ ಹಣವನ್ನ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡುವುದೇ ಅಕ್ರಮ. ಅಕ್ರಮ ಹಣ ವರ್ಗಾವಣೆಯ ಅರ್ಧದಷ್ಟು ಹಣ ವೈಯಕ್ತಿಕ ಖಾತೆಗಳಿಗೆ ಹೋಗಿದೆ.