ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ 2ನೇ ದಿನವಾದ ಮಂಗಳವಾರವು ಸಹ ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ (Valmiki Corporation Scam) ಸದ್ದು ಮಾಡಿತು. ಪ್ರಕರಣದ ಬಗ್ಗೆ ಸಹ ಚರ್ಚೆ ಮುಂದುವರಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashoka) ವಾಲ್ಮೀಕಿ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಅಂತ ಒತ್ತಾಯಿಸಿದರು.
ಸಿಎಂ (CM Siddaramaiah) ಅವರು 187 ಕೋಟಿ ರೂ. ಅಕ್ರಮ ವರ್ಗಾವಣೆ ಆಗಿಲ್ಲ, ವರ್ಗಾವಣೆ ಆಗಿರೋದು 89.62 ಕೋಟಿ ರೂ. ಅಂದ್ರು. ಆ ಮೂಲಕ ಅಕ್ರಮ ಒಪ್ಪಿಕೊಂಡಿದ್ದಾರೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಪದವಾಗಿ ಸತ್ತರೂ ಪದ್ಯವಾಗಿ ಬದುಕಬಹುದು- ಅಪರ್ಣಾರನ್ನು ನೆನೆದು ಕವನ ಬರೆದ ಪತಿ
ಕಳವು ಮಾಡಲು ಎಂ.ಜಿ ರಸ್ತೆ ಬ್ಯಾಂಕಿಗೆ 187 ಕೋಟಿ ವರ್ಗಾವಣೆ ಮಾಡಿದ ಮೇಲೆ, ಇದು ಪಕ್ಕಾ 187 ಕೋಟಿ ರೂ. ಅಕ್ರಮನೇ. ಈ ಕಳ್ಳತನ ಸಿಎಂಗೆ ಗೊತ್ತಿದ್ರೂ ಅವರದ್ದೇ ತಪ್ಪು, ಗೊತ್ತಿಲ್ಲ ಅಂದ್ರೂ ಅವರದ್ದೇ ತಪ್ಪು, ಯಾಕಂದ್ರೆ ಸಿಎಂ ಅವರೇ ಹಣಕಾಸು ಇಲಾಖೆ ಯಜಮಾನರು ಅಂತ ಸಿಎಂಗೆ ಕುಟುಕಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಅಕ್ರಮ; ಯಾರೆಷ್ಟೇ ದೊಡ್ಡವರಾದರೂ ಸಿಬಿಐ, ಇಡಿ ತನಿಖೆ ನಡೆದೇ ನಡೆಯಲಿದೆ: ಬಿ.ವೈ.ವಿಜಯೇಂದ್ರ
ಇನ್ನೂ ವಾಲ್ಮಿಕಿ ಜನಾಂಗದ ಶಾಪ ಸರ್ಕಾರಕ್ಕೆ ತಟ್ಟಬಾರದು ಅಂದ್ರೆ ಕೂಡಲೇ 187 ಕೋಟಿ ರೂ. ವಾಪಸ್ ಪಡೆಯಬೇಕು. ಪ್ರಕರಣದ ಸಿಬಿಐ ತನಿಖೆ ಆಗಬೇಕು. ಇದು ಸಿಎಂ ಹಣಕಾಸು ಇಲಾಖೆಗೆ ಬರುತ್ತೆ, ಸಿಎಂ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು. ಇದನ್ನೂ ಓದಿ: ಟೊಮೆಟೊ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಬ್ಯಾನರ್ ಕಟ್ಟಿದ ರೈತ!