ಬೆಂಗಳೂರು: ಬಿಜೆಪಿ (BJP) ಕೇಳಿದ ಕೂಡಲೇ ರಾಜೀನಾಮೆ ನೀಡಲು ಆಗುವುದಿಲ್ಲ ಎಂದು ಸಚಿವ ನಾಗೇಂದ್ರ (Nagendra) ಪರ ಸಂಸದ ಡಿಕೆ ಸುರೇಶ್ (DK Suresh) ಬ್ಯಾಟಿಂಗ್ ಮಾಡಿದ್ದಾರೆ.
ವಾಲ್ಮೀಕಿ ನಿಗಮದ ಅಕ್ರಮದ ಪ್ರಕರಣವನ್ನ ಸಿಬಿಐಗೆ (CBI) ಕೊಡಬೇಕು ಎಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ಪೊಲೀಸ್ (Karnataka Police) ಸಮರ್ಥವಾಗಿದೆ. ಕರ್ನಾಟಕ ಪೊಲೀಸ್ ಎಲ್ಲಾ ನಿಭಾಯಿಸುತ್ತದೆ. ಸಿಬಿಐ ಕೊಡಿ ಅನ್ನೋದು ಬಿಟ್ಟು ಬಿಜೆಪಿ ಬೇರೆ ಏನು ಇಲ್ಲ. ಸಿಬಿಐ ಮುಖ್ಯಸ್ಥರು ನಮ್ಮ ರಾಜ್ಯದವರೇ. ಕೇಂದ್ರದಲ್ಲಿ ಬಿಜೆಪಿ ಇದೆ. ನಮಗೆ ಅನುಕೂಲ ಆಗಲಿದೆ ಅಂತ ಕೇಳ್ತಾರೆ ಅಂತ ಆರೋಪ ಮಾಡಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಹಗರಣ – ಅಕ್ರಮದ ತನಿಖೆಗೆ ಇಳಿಯುತ್ತಾ ಸಿಬಿಐ?
- Advertisement -
- Advertisement -
ಈಗಾಗಲೇ ಕರ್ನಾಟಕದಿಂದ 4-5 ಕೇಸ್ ಸಿಬಿಐಗೆ ಕೊಟ್ಟಿದ್ದೇವೆ. ಅದರಲ್ಲಿ ಏನು ಪ್ರಯೋಜನ, ನ್ಯಾಯ ಸಿಗಲಿಲ್ಲ. ನಮ್ಮ ಪೊಲೀಸರು ನೀಡಿದ ವರದಿಯನ್ನೇ ನೀಡಿತ್ತು. ಹೀಗಾಗಿ ಸಿಬಿಐ ಏನು ವಿಶೇಷ ಅಲ್ಲ. ಆದರೆ ಬಿಜೆಪಿ ಅವರು ಎಲ್ಲದ್ದಕ್ಕೂ ರಾಜೀನಾಮೆ ಕೇಳುತ್ತಾರೆ. ಕೇಳಿದ ಕೂಡಲೇ ನೀಡಲು ಆಗುವುದಿಲ್ಲ, ಈಶ್ವರಪ್ಪ ಕೇಸ್ ಬೇರೆ. ಈ ಕೇಸ್ ಬೇರೆ ಎಂದು ಹೇಳಿದರು.
- Advertisement -
ಸಿಎಂ ಸಿದ್ದರಾಮಯ್ಯ ಸಿಐಡಿ (CID) ತನಿಖೆಗೆ ಆದೇಶ ಮಾಡಿದ್ದಾರೆ. ತಪ್ಪು ಯಾರೇ ಮಾಡಿದರೂ ಕ್ರಮ ಆಗುತ್ತದೆ. ನಾಗೇಂದ್ರ ಅಂತಹ ವ್ಯಕ್ತಿಯಲ್ಲ. ಸ್ಥಳೀಯ ರಾಜಕೀಯಕ್ಕಾಗಿ ಹೀಗೆ ಆರೋಪ ಮಾಡುತ್ತಿದ್ದಾರೆ. ತನಿಖೆ ನಡೆದಾಗ ಸತ್ಯಾಂಶ ಹೊರಬರಲಿದೆ ಎಂದರು.
- Advertisement -
ಬಿಜೆಪಿಯವರು ಪ್ರತಿಭಟನೆ ಮಾಡಲಿ. ಬೇಡ ಅಂದವರು ಯಾರು? ವಿಪಕ್ಷ ಯಾವಾಗಲು ಆಡಳಿತ ಪಕ್ಷವನ್ನು ಎಚ್ಚರಿಸಬೇಕು. ಅವರು ಎಚ್ಚರಿಸುವ ಕೆಲಸ ಮಾಡಲಿ ಎಂದು ಬಿಜೆಪಿ ಡೆಡ್‌ಲೈನ್‌ಗೆ ಡಿಕೆಸು ತಿರುಗೇಟು ನೀಡಿದರು.