– ಬಿಜೆಪಿ ಅವಧಿಯ ಹಗರಣಗಳನ್ನೂ ಬಿಚ್ಚಿಡ್ತೀವಿ ಎಂದ ಡಿಕೆಶಿ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ (Valmiki Corporation Scam) ಸಿಎಂ ಹಾಗೂ ಡಿಸಿಎಂ ಯಾರ ಬುಡಕ್ಕೆ ಬರುತ್ತೋ ನೋಡೋಣ. ಯಾರೋ ಅಯೋಗ್ಯ ನನ್ನ ಮಕ್ಕಳು ಅಧಿಕಾರಿಗಳು ಮಾಡಿರೋದು. ನಮಗೇನು 10 ರೂಪಾಯಿ ಸಿಕ್ಕಿಲ್ಲ. ನಾವೇನು ಮಾಡಬಾರದ್ದು ಮಾಡಿದ್ದೇವೆ? ನಾವೇನು ಹಗರಣದಲ್ಲಿ ಭಾಗಿಯಾಗಿದ್ದೇವೆಯೇ? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಬಿಜೆಪಿ (BJP) ವಿರುದ್ಧ ಲೇವಡಿ ಮಾಡಿದ್ದಾರೆ.
Advertisement
ಎಲ್ಲಾ ಬಿಚ್ಚಿಡ್ತೀವಿ:
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರಾಜಕಾರಣ ಗಮನದಲ್ಲಿಟ್ಟುಕೊಳ್ಳದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ಕೊಟ್ಟಿದ್ದೇವೆ. ತನಿಖೆ ನಡೆಯುವ ಸಂದರ್ಭದಲ್ಲಿ ಚರ್ಚೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ನಾವೇ ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ನಾವು ಏನು ಉತ್ತರ ಹೇಳಿಲ್ಲ. ನಾವು ಉತ್ತರ ಕೊಟ್ಟರೇ ಅವರದ್ದೂ ಹೊರಗಡೆ ಬರಲಿದೆ. ಇದಕ್ಕೇ ಬಿಜೆಪಿಗರು ಉತ್ತರ ಕೊಡಲು ಬಿಡುತ್ತಿಲ್ಲ. ನಮ್ಮ ಹತ್ತಿರ ಬಿಜೆಪಿಯವರ ಅವಧಿಯ ನಿಗಮದ ದಾಖಲೆಗಳಿವೆ. ಯರ‍್ಯಾರ ಕಾಲದಲ್ಲಿ ಏನೇನೂ ಆಗಿದೆ ಎಲ್ಲಾ ಬಿಚ್ಚಿಡ್ತೀವಿ ಎಂದು ಅವರು ಕಿಡಿಕಾರಿದ್ದಾರೆ.
Advertisement
Advertisement
ಬಿಜೆಪಿಯವರ ಬ್ರಹ್ಮಾಂಡ ಭ್ರಷ್ಟಾಚಾರ ಮುಚ್ಚಿ ಹಾಕಲು ಶುಕ್ರವಾರ (ಜು.19) ಸಹ ಪ್ರತಿಭಟನೆ ಮುಂದುವರಿಸುತ್ತಾರೆ. ಅವರು ಏನು ಬೇಕಾದರೂ ಮಾಡಲಿ. ಇನ್ನೂ ಮುಂದೆ ಏನು ಬೇಕಾದರೂ ರಾಜಕಾರಣ ಮಾಡಲಿ, ನಾವು ಸಂವಿಧಾನದ ಪ್ರಕಾರ ಗೌರವಕೊಟ್ಟು ರಾಜಕಾರಣ ಮಾಡ್ತೀವಿ ಎಂದು ಅವರು ಹೇಳಿದ್ದಾರೆ.
Advertisement
ಜಾರಿ ನಿರ್ದೇಶನಾಲಯದಿಂದ ಒತ್ತಡ ಹಾಕಿ ಸರ್ಕಾರದ ಪ್ರಮುಖರ ಹೆಸರು ಹೇಳಿಸುವ ಬಗ್ಗೆ ಸಚಿವರ ಆರೋಪ ವಿಚಾರವಾಗಿ, ನಮ್ಮ ಸಚಿವರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ನಾನು ಮಾತಾಡಲ್ಲ. ಈ ವೇಳೆ ನಾನು ಇರಲಿಲ್ಲ ಆಸ್ಪತ್ರೆಗೆ ಹೋಗಿದ್ದೆ. ನಾನು ಮಾಹಿತಿ ಪಡೆದು ಮಾತಾಡುತ್ತೇನೆ ಎಂದಿದ್ದಾರೆ.